"ಆಲ್ಟ್‌ನ್ಯೂಸ್‌ ಸಹ-ಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ರ ಟ್ವೀಟ್‌ ಗಳು ಅರಿತು ಮಾಡಿದ ಅಪರಾಧವಲ್ಲ"

Update: 2022-05-20 16:02 GMT

ಹೊಸದಿಲ್ಲಿ: ಆಲ್ಟ್‌ನ್ಯೂಸ್‌ ಸಹ-ಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ವಿರುದ್ಧ ದಾಖಲಾಗಿರುವ ಎರಡು ಎಫ್ಐಆರ್‌ ಗಳ ಕುರಿತು ವರದಿ ಸಲ್ಲಿಸಿರುವ ದಿಲ್ಲಿ ಪೊಲೀಸರು, "ಝುಬೈರ್‌ ಮಾಡಿರುವ ಟ್ವೀಟ್‌ ಗಳಲ್ಲಿ ಯಾವುದೇ ಅರಿತು ಮಾಡಿದ ಅಪರಾಧದ ಅಂಶಗಳಿಲ್ಲ" ಎಂದು ಉಲ್ಲೇಖಿಸಿದ್ದಾಗಿ barandbench ವರದಿ ಮಾಡಿದೆ. ದಿಲ್ಲಿ ಹೈಕೋರ್ಟ್‌ ಗೆ ವರದಿಯನ್ನು ಸಲ್ಲಿಸಲಾಗಿದೆ. 

ಆಗಸ್ಟ್‌ 2020ರಲ್ಲಿ ಜಗದೀಶ್‌ ಸಿಂಗ್‌ ಎಂಬ ಟ್ವಿಟರ್‌ ಬಳಕೆದಾರ ಮಾಡಿದ್ದ ನಿಂದನಾತ್ಮಕ ಕಾಮೆಂಟ್‌ ಗೆ ಮರು ಉತ್ತರಿಸಿದ ಝುಬೈರ್‌ ರ ಟ್ವೀಟ್‌ ಕುರಿತು ಪ್ರಕರಣ ದಾಖಲಾಗಿತ್ತು. ನಿಂದನಾತ್ಮಕ ಕಮೆಂಟ್‌ ಗೆ ಪ್ರತಿಕ್ರಿಯಿಸುವ ವೇಳೆ ಝುಬೈರ್‌ ಆ ವ್ಯಕ್ತಿಯ ಪ್ರೊಫೈಲ್‌ ನಲ್ಲಿದ್ದ, ಅವರ ಮೊಮ್ಮಗಳ ಜೊತೆಗಿರುವ ಫೋಟೊವನ್ನು(ಮುಖ ಬ್ಲರ್‌ ಮಾಡಲಾಗಿತ್ತು) ಲಗತ್ತಿಸಿದ್ದರು. ಜೊತೆಗೆ, "ಹಲೋ ಜಗದೀಶ್‌ ಸಿಂಗ್‌, ನೀವು ಸಾಮಾಜಿಕ ತಾಣದಲ್ಲಿ ಜನರಿಗೆ ನಿಂದನಾತ್ಮಕ ಕಾಮೆಂಟ್‌ ಮಾಡುವ ಪಾರ್ಟ್‌ಟೈಮ್‌ ಕೆಲಸ ಮಾಡುತ್ತಿದ್ದೀರೆಂದು ನಿಮ್ಮ ಪುಟ್ಟ ಮುದ್ದಾದ ಮೊಮ್ಮಗಳಿಗೆ ತಿಳಿದಿದೆಯೇ? ನೀವು ಈ ಪ್ರೊಫೈಲ್‌ ಫೋಟೊ ಬದಲಾಯಿಸಬೇಕಾಗಿ ನಿಮಗೆ ಸಲಹೆ ನೀಡುತ್ತೇನೆ" ಎಂದು ಬರೆದುಕೊಂಡಿದ್ದರು.

ಒಂದು ತಿಂಗಳ ನಂತರ, ಟ್ವಿಟರ್‌ನಲ್ಲಿ ಅಪ್ರಾಪ್ತ ಬಾಲಕಿಗೆ "ಬೆದರಿಕೆ ಮತ್ತು ಚಿತ್ರಹಿಂಸೆ" ನೀಡಿದ ಆರೋಪದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ದಿಲ್ಲಿ ಮತ್ತು ರಾಯ್‌ಪುರದಲ್ಲಿ ಝುಬೈರ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News