ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಇಸ್ಮಾಯಿಲ್ ತಳಕಲ್‍ರ ‘ಬೆತ್ತಲೆ ಸಂತ' ಸಂಕಲನ ಆಯ್ಕೆ

Update: 2022-05-22 17:03 GMT
ಇಸ್ಮಾಯಿಲ್ ತಳಕಲ್

ಬೆಂಗಳೂರು, ಮೇ 22: ‘ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಟಾನದಿಂದ ನೀಡುವ ‘ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ' ಪ್ರಶಸ್ತಿಯು 2021ನೆ ಸಾಲಿಗೆ ಕತೆಗಾರ ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ' ಸಂಕಲನ ಆಯ್ಕೆಯಾಗಿದೆ.

ಇಸ್ಮಾಯಿಲ್ ತಳಕಲ್ ಅವರು ಕೊಪ್ಪಳ ಜಿಲ್ಲೆ ಗೊಂಡಬಾಳದವರು. 1986ರ ಜೂನ್ 1ರಂದು ಜನಿಸಿರುವ ಅವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಖನಗಾಂವ ಸರಕಾರ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರಾಗಿದ್ದು, ಇವರ ಬೆತ್ತಲೆ ಸಂತ ಇವರ ಪ್ರಥಮ ಕಥಾಸಂಕಲನ. 2020ರಲ್ಲಿ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಇವರ ‘ರೋಗಗ್ರಸ್ಥ' ಕಥೆಗೆ ಎರಡನೆ ಬಹುಮಾನ ಸಂದಿದೆ.

ಪ್ರಶಸ್ತಿಯು 25 ಸಾವಿರ ರೂ.ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 2022ರ ಜೂನ್ 11ರ ಶನಿವಾರ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಟಾನದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News