ಪ್ರತಿಭೆಯನ್ನು ಜಾತಿಯಿಂದ ಅಳೆಯುವವರು

Update: 2022-05-23 18:37 GMT

ಮಾನ್ಯರೇ,

ಮೊನ್ನೆ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ನಿಜಕ್ಕೂ ಸಂತೋಷದ ವಿಷಯ. ಆದರೆ ಸಾಮಾಜಿಕ ಜಾಲತಾಣದ ಕೆಲ ಪುಟಗಳು ಮತ್ತು ಜಾತಿವಾದದ ವಿಕೃತ ಮನಸ್ಸುಳ್ಳವರು, ತಮ್ಮ, ತಮ್ಮ ಜಾತಿಯ ವಿದ್ಯಾರ್ಥಿಗಳು ರಾಜ್ಯಕ್ಕೆ/ಜಿಲ್ಲೆಗೆ ಟಾಪರ್ ಎಂದು ವಿಜೃಂಭಿಸುವ ಪೋಸ್ಟ್‌ಗಳನ್ನು ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಹೆಮ್ಮೆ ಪಡಬೇಕೇ ಹೊರತು ಕೇವಲ ಒಂದು ಜಾತಿಗೆ ಸೀಮಿತ ಮಾಡಿ ವಿಜೃಂಭಿಸುವುದಲ್ಲ. ಯಾವುದೇ ಒಬ್ಬ ವಿದ್ಯಾರ್ಥಿ ತಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು, ತಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂಬ ಸಾವಿರಾರು ಕನಸುಗಳನ್ನು ಇಟ್ಟುಕೊಂಡು ಓದುತ್ತಾನೆಯೇ ಹೊರತು, ತಾನು ಆ ಜಾತಿಯವನು, ನಮ್ಮ ಜಾತಿಗೆ ರ್ಯಾಂಕ್ ಬರಬೇಕು ಎಂದಲ್ಲ.
ಕೆಲವರು ಮುಗ್ಧ ಎಳೆಯ ಮನಸ್ಸುಗಳ ಮಕ್ಕಳಲ್ಲಿ ಜಾತಿ ಎಂಬ ವಿಷ ಬೀಜವನ್ನು ಬಿತ್ತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಇನ್ನೂ ಜಾತಿ ಎಂಬ ಚಕ್ರವ್ಯೆಹದಲ್ಲಿ ಸಿಲುಕಿ ಗಿರಕಿ ಹೊಡೆಯುತ್ತಿರುವುದು ನಿಜಕ್ಕೂ ದುರಂತ.
 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News