ಮಧ್ಯಪ್ರದೇಶ: ರೈಲು ನಿಲ್ದಾಣದಲ್ಲಿ 'ಗಾರ್ಬಾ' ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಯಾಣಿಕರು; ಕಾರಣವೇನು ಗೊತ್ತೇ?

Update: 2022-05-26 14:14 GMT
kooapp.com/ashwinivaishnaw

ಭೋಪಾಲ್: ಮಧ್ಯಪ್ರದೇಶದ ರತ್ಲಾಮ್‌ನಲ್ಲಿರುವ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ, ವಿಶೇಷ ಪ್ರಸಂಗವೊಂದು ನಡೆದಿದೆ.  ಹಲವಾರು ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ 'ಗಾರ್ಬಾ ನೃತ್ಯ' ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ. 
 
ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ನಂ.5ರಲ್ಲಿ ಜನರ ಗುಂಪು ನೃತ್ಯ ಮಾಡಲು ಪ್ರಾಂಭಿಸಿದ್ದು, ಈ ನೃತ್ಯದ ವಿಡಿಯೋವನ್ನು ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ,  ರೈಲು ಸಮಯಕ್ಕಿಂತ 20 ನಿಮಿಷ ಮುಂಚಿತವಾಗಿ ಬಂದಿರುವುದನ್ನು ಪ್ರಯಾಣಿಕರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ ಎಂದು ಹೇಳಲಾಗಿದೆ. 

ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15 ಕ್ಕೆ ರತ್ಲಾಮ್ ನಿಲ್ದಾಣಕ್ಕೆ ತಲುಪಿದ್ದು, ಇದು ವೇಳಾಪಟ್ಟಿಗಿಂತಲೂ 20 ನಿಮಿಷಗಳ ಮುಂಚಿತವಾಗಿ ತಲುಪಿದೆ.  ರತ್ಲಾಮ್‌ ನಿಲ್ದಾಣದಲ್ಲಿ ರೈಲು 10 ನಿಮಿಷಗಳ ನಿಲುಗಡೆ ಸಮಯವನ್ನು ಹೊಂದಿತ್ತು, ಆದರೆ, 20 ನಿಮಿಷ ಶೀಘ್ರವೇ ರೈಲು ಬಂದಿರುವುದರಿಂದ ಪ್ರಯಾಣಿಕರಿಗೆ 30 ನಿಮಿಷಗಳು ಸಿಕ್ಕಿದೆ ಎಂದು ndtv ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News