''ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ'': ವಿವಾದಕ್ಕೀಡಾಗಿದ್ದ ಸಚಿವರ ಹೇಳಿಕೆಗೆ ರೋಹಿತ್ ಚಕ್ರತೀರ್ಥ ಪ್ರತಿಕ್ರಿಯೆ

Update: 2022-05-26 16:29 GMT

ಬೆಂಗಳೂರು: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ, ಶಿಕ್ಷಣ ಸಚಿವರು ಮಾತನಾಡುವ ಬರದಲ್ಲಿ ಹೇಳಿರಬಹುದು ಎಂದು ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟಿವಿ ವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ನಾನು ಐಐಟಿ ಮತ್ತು ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಿದ್ದೇನೆ. ನಾನು ಐಐಟಿ ಹಾಗೂ ಸಿಇಟಿ ಪ್ರೊಫೆಸರ್ ಎಂಬುದನ್ನು ನಿರಾಕರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ  ''ಟೀಕೆಗಳನ್ನು ಮಾಡುತ್ತಿರುವವರಿಗೆ ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆ ಗೊತ್ತಿಲ್ಲ. ಅವರೊಬ್ಬ ಐಐಟಿ-ಸಿಇಟಿ ಪ್ರೊಫೆಸರ್ . ಅವರ ಹಿನ್ನೆಲೆ ಏನು ಎಂಬುದನ್ನು ತಿಳಿಯದೆ ಹೇಳಿಕೆಗಳನ್ನು ನೀಡಬಾರದು'' ಎಂದು ಹೇಳಿದ್ದರು. ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವ್ಯಾಪಕ ಆಕ್ರೋಶ, ಟೀಕೆಗಳು ವ್ಯಕ್ತವಾಗಿತ್ತು. 

'ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಸ್ಪಷ್ಟಪಡಿಸಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನೆ ಮಾಡಿರುವ ಹಲವಾರು ಟ್ರೋಲ್, ಮೀಮ್ ಗಳು  ವೈರಲ್ ಆಗಿದ್ದವು. 

ಇದೀಗ ರೋಹಿತ್ ಚಕ್ರತೀರ್ಥ ಅವರೇ  ತಮ್ಮ ವಿದ್ಯಾರ್ಹತೆಯ ಕುರಿತು ಟಿಪ್ಪಣಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, “ಬೇಸ್, ಟೈಮ್ ಮೊದಲಾದ ಸಂಸ್ಥೆಗಳಲ್ಲಿ ಐಐಟಿ, ಜೆಇಇ, ಎನ್‌ಟಿಎಸ್‌ಸಿ, ಸಿಎಟಿ, ಸಿಇಟಿ ಮತ್ತು ಒಲಂಪಿಯಾಡ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದಾರೆ. ವಿದ್ಯವರ್ಧಕ ಕಾಲೇಜು, ಕೆಎಲ್‌ಇ ಮತ್ತು ಜೈನ್ ಕಾಲೇಜುಗಳಲ್ಲಿ ಗಣಿತ ಬೋಧಿಸಿದ್ದಾರೆ” ಎಂದು ಬರೆಯಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News