ಸಿಬಿಎಸ್‌ಇಗೆ ಸಾಹಿತಿ ಬರಗೂರು ಸಮಿತಿ ಪರಿಷ್ಕರಿಸಿದ್ದ ಪುಸ್ತಕಕ್ಕೆ ಆದ್ಯತೆ

Update: 2022-05-28 05:58 GMT

ಬೆಂಗಳೂರು: ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಹಳೆಯ ಪಠ್ಯಕ್ರಮವನ್ನೇ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾಗಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE)  ಉಳಿಸಿಕೊಂಡಿರುವ ಬಗ್ಗೆ 'ಪ್ರಜಾವಾಣಿ' ವರದಿ ಮಾಡಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯಕ್ರಮವನ್ನು ಸಿಬಿಎಸ್‌ಇ 10 ಮತ್ತು 9ನೇ ತರಗತಿಗಳಿಗೆ ಕನ್ನಡ ವಿಷಯದ ಪಠ್ಯವಾಗಿ ಮುಂದುವರಿಸಿದೆ.

ರಾಜ್ಯ ಸರ್ಕಾರ ನೇಮಿಸಿದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ  ಸಮಿತಿಯು  ಇದೇ ಪಠ್ಯದಲ್ಲಿನ ಹಲವು ಅಧ್ಯಾಯಗಳನ್ನು ಕೈಬಿಡಲು ಶಿಫಾರಸು ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಸಿಬಿಎಸ್ ಇ ಮಾತ್ರ ಬರಗೂರು ಸಮಿತಿ ಪರಿಷ್ಕರಿಸಿದ್ದ ಪುಸ್ತಕಕ್ಕೆ ಆದ್ಯತೆ ನೀಡಿದೆ.

ರಾಜ್ಯ ಸರ್ಕಾರ ಕೈಬಿಟ್ಟಿರುವ ವಿಷಯಗಳನ್ನೇ ಕೇಂದ್ರದ ಪಠ್ಯಗಳಲ್ಲಿ ಅಳವಡಿಸಲಾಗಿದೆ. ಗಾಂಧಿವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ‘ಕನ್ನಡ ಮೌಲ್ವಿ’ , ಅರವಿಂದ ಮಾಲಗತ್ತಿ ಅವರ ‘ಮರಳಿ ಮನೆಗೆ’, ಕೆ.ನೀಲಾ ಅವರ ‘ರಂಜಾನ್‌ ಸುರಕುಂಬಾ’ ಅಧ್ಯಾಯವನ್ನು ಸಿಬಿಎಸ್‌ಇ ಪಠ್ಯದಲ್ಲಿ ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News