ಶಿಕ್ಷಣ ಪಡೆಯಲು ಹಿಜಾಬ್ ವಿಚಾರ ಅಡ್ಡಿಯಾಗದಿರಲಿ: ಕವಿತಾ ಕೃಷ್ಣನ್

Update: 2022-05-28 06:00 GMT

ದಾವಣಗೆರೆ : ಪರಸ್ಪರರ ಬಗ್ಗೆ ಪ್ರೀತಿ, ವಿಶ್ವಾಸ, ಒಬ್ಬೊಬ್ಬರ ಭಾಷೆ, ಸಂಸ್ಕೃತಿಯ ಕುರಿತ ಒಳ್ಳೆಯದನ್ನು ಯೋಚಿಸುವುದು-ಇದೆಲ್ಲವನ್ನೂ ಮುಗಿಸಲು ನೋಡುತ್ತಿದ್ದಾರೆ ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕವಿತಾ ಕೃಷ್ಣನ್ ಆತಂಕ ವ್ಯಕ್ತಪಡಿಸಿದರು.

ನಗರದ ತಾಜ್ ಪ್ಯಾಲೇಸ್‍ನಲ್ಲಿ ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗ ಸಂಯುಕ್ತಾಶ್ರಯಲ್ಲಿ ಶುಕ್ರವಾರದಿಂದ `ಸ್ವಾತಂತ್ರ್ಯ-75: ನೆಲದ ದನಿಗಳು ಗಳಿಸಿದ್ದೇನು? ಕಳಕೊಂಡಿದ್ದೇನು?'ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ 8ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು.

ಮೋದಿ ಸರ್ಕಾರ ಪ್ರತಿ ಬಾರಿ ಅತ್ಯಾಚಾರಿಗಳ ಪರವಾಗಿ ನಿಂತಿದೆ.ಅತ್ಯಾಚಾರಿಗಳನ್ನು ಬಜಾರಿನಲ್ಲಿ ಮೆರವಣಿಗೆ ಮಾಡಿದ ಬೇರೆ ಯಾವುಧೇ ಪಕ್ಷವಿಲ್ಲ. ಆದರೂ, ಅವರು ನಾವು ಮಹಿಳೆಯರ ಪರ ಅನ್ನುತ್ತಾರೆ.ಏಕೆಂದರೆ ನಾವು ಟ್ರಿಪಲ್ ತಲಾಖ್ ವಿರುದ್ಧ ಕಾನೂನು ಮಾಡಿದ್ದೇವೆ ಎಂದು.ಇದರ ಬಗ್ಗೆ ಮುಸ್ಲಿಂ ಮಹಿಳೆಯರು ಕೋರ್ಟಿಗೆ ಹೋದಾಗ, ಕೋರ್ಟ್ ಕೂಡಾ ಹೌದು ಮೂರು ಬಾರಿ ತಲಾಖ್ ಹೇಳಿಬಿಟ್ಟರೆ ವಿಚ್ಛೇದನ ಆಗುವುದಿಲ್ಲ. ಇದರಲ್ಲಿ ಸ್ಪಷ್ಟತೆ ಇರಬೇಕು.ಇದಕ್ಕೆ ಕೋರ್ಟ್ ಕಾನೂನು ಮಾಡಿ ಎನ್ನಲಿಲ್ಲ, ಇವರೇ ಕಾನೂನು ಮಾಡಿದರು ಎಂದರು.

ಈಗಾಗಲೇ ಮುಸ್ಲಿಂ ಪರ್ಸನಲ್ ಕಾಯ್ದೆಯಲ್ಲಿ ಸರಿಯಾದ ವಿಧಾನ ಇದೆ.ಆದರೂ, ಕಾನೂನು ಪ್ರಕಾರ ಯಾರೇ ಮೂರನೇ ವ್ಯಕ್ತಿ ಆಪಾದನೆ ಮಾಡಿದರೂ ತಲಾಖ್ ನೀಡಿದ್ದಕ್ಕೆ ಮುಸ್ಲಿಂ ಗಂಡಸು ಜೈಲಿಗೆ ಹೋಗುತ್ತಾರೆ.  ಅನೇಕ ಪುರುಷರು ಮಹಿಳೆಯರನ್ನು ಹಾಗೇ ತಿರಸ್ಕರಿಸಿ ಹೋಗಿ ಬಿಡುವುದುಂಟು, ಆದರೆ ಯಾರೂ ಜೈಲಿಗೆ ಹೋಗುತ್ತಿಲ್ಲ. ಸ್ವತಃ ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಒಂದು ಸಮುದಾಯದ ಗಂಡಸರಿಗೆ  ಮಾತ್ರ ಏಕೆ? ಎಂದರು.

ನೀವು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಹಾಸ್ಟೆಲ್ ಉದ್ಯೋಗ ಇತ್ಯಾದಿ ಕೊಡಿ, ಮಕ್ಕಳು ನಿಧಾನವಾಗಿ ಮದುವೆಯಾಗುತ್ತಾರೆ.ಅದೇನನ್ನೂ ಕೊಡದೆ ಈಗ ಅವರ ಒಂದು ಅವಕಾಶವನ್ನೂ ತೆಗೆಯಲಾಗುತ್ತಿದೆ. ಹಿಜಾಬ್ ವಿಚಾರದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಮುಕ್ತಿ ಕೊಡಿಸಿದೆ  ಎಂದು ಜನರು ಭಾವಿಸಿದ್ದಾರೆ.  ಪ್ರತಿಭಾ ಪಾಟೀಲ್ ಇಂದಿರಾಗಾಂಧಿ ಅವರುಗಳು ತಲೆ ಮುಚ್ಚಿಕೊಳ್ಳದೆ ಭಾಷಣ ಮಾಡುತ್ತಿರುವ ಒಂದೇ ಫೋಟೋ ತೊರಿಸಿ ಎಂದ. ಅವರು, ಮಹಿಳೆಯರನ್ನು ಯಾಕೆ ಇದೇ ಬಟ್ಟೆ ಧರಿಸಿದ್ದಾರೆ ಎಂದು ದಯಮಾಡಿ ಕೇಳಲೇಬೇಡಿ. ಶಿಕ್ಷಣ ಪಡೆಯಲು ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಯಾಕೆ ಕಾರಣವಾಗಬೇಕು?ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News