VIDEO- ಯಾದಗಿರಿ: ಖಾಕಿ ಸರ್ಪಗಾವಲಿನಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು

Update: 2022-05-28 15:45 GMT

ಯಾದಗಿರಿ:  ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ಹಿನ್ನೆಲೆ ಜಿಲ್ಲೆಯ ಸುರಪುರ ತಾಲೂಕಿನ  ಹೂವಿನಹಳ್ಳಿ ಗ್ರಾಮದ ದಲಿತ ಮಹಿಳೆಯರು ಅಮಲಿಹಾಳ ಗ್ರಾಮಕ್ಕೆ  ಪೋಲೀಸ್ ವಾಹನದಲ್ಲಿ ಬಿಗಿ ಪೋಲೀಸ್ ಬಂದೋ ಬಸ್ತ್ ನೊಂದಿಗೆ ತೆರಳಿ ಗ್ರಾಮದ ಆಂಜನೇಯ  ದೇಗುಲ ಒಳಗಡೆ ಪ್ರವೇಶ ಮಾಡಿರುವ ಪ್ರಸಂಗ ನಡೆಯಿತು. 

ಮುಂಜಾಗ್ರಾತಾ ಕ್ರಮವಾಗಿ ಯಾವುದೇ ಅಹಿತರ ಘಟನೆ ನಡೆಯದಂತೆ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಇಂದಿನಿಂದ ಮುಂದಿನ ಆದೇಶದವರೆಗೆ ತಾಲೂಕು ತಹಸೀಲ್ದಾರರಾದ ಸುಬ್ಬಣ್ಣ ಜಮಖಂಡಿಯವರು 144 ಕಲಂ ಸೆಕ್ಷನ್ ಜಾರಿಗೊಳಿಸಿದರು. 

ಹುಣಸಗಿ ತಾಲೂಕಿನ ಅಮಲಿಹಾಳ ಗ್ರಾಮದಲ್ಲಿ ಹುಣಸಗಿ ತಹಸೀಲ್ದಾರರಾದ ಅಶೋಕ ಸುರಪುರ ಅವರು ಇವತ್ತು ಒಂದು ದಿನ  144 ಕಲಂ ಸೆಕ್ಷನ್ ಜಾರಿಗೊಳಿಸಿದರು. 

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಸಹಾಯಕ ಆಯುಕ್ತರಾದ ಶಾ ಆಲಂ ಹುಸೇನ್, ಜಿಲ್ಲಾ ‌ ಪೋಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಮತ್ತು  ಸಿಪಿಐ, ಪಿಎಸ್ಐ, ಎಎಸ್ಐ, ಜಮಾದಾರ್, ನೂರಕ್ಕು  ಹೆಚ್ಚು ಪೋಲಿಸ್ ಸಿಬ್ಬಂದಿಗಳನ್ನು ನಿಯೋಜನೆ‌ ಮಾಡಲಾಗಿತ್ತು‌. 

ಎರಡೂ ಗ್ರಾಮದ ಮುಖಂಡರನ್ನು ಸೇರಿಸಿ  ಸಭೆ ನಡೆಸಿ  ಆಂಜನೇಯ ದೇಗುಲ ಪ್ರವೇಶ ಮಾಡಲು ಒಪ್ಪಿಗೆ ನೀಡಿದ ಬಳಿಕ ದೇವಸ್ಥಾನ ಪ್ರವೇಶ ಮಾಡಿ ಪೂಜೆ, ಪುನಸ್ಕಾರ, ಆರತಿ ಬೆಳಗಿ ದಲಿತ ಮಹಿಳೆಯರು ಸಂತಸಪಟ್ಟರು. 
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News