ಭಾರತದ ಸಂಸ್ಕೃತಿ ಅರಿಯದವರು ದೇವಸ್ಥಾನ-ಮಸೀದಿಗಳ ಬಗ್ಗೆ ಮಾತನಾಡುತ್ತಾರೆ: ಶಾಫಿ ಸಅದಿ

Update: 2022-05-29 18:39 GMT

ಕಲಬುರಗಿ:  ಭಾರತದ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ದೇವಸ್ಥಾನ, ಮಸೀದಿಗಳ ಕುರಿತಂತೆ ಮಾತನಾಡುತ್ತಾರೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ. 

ರವಿವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಗಳನ್ನು ಬಿಟ್ಟುಕೊಡಿ ಎಂಬ ಹಿಂದು ಪರ ಸಂಘಟನೆಯ ಮುಖಂಡರ ಹೇಳಿಕೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು.

ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ, ಮಠ ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂದಿರಗಳು ಇವೆಯೋ ಅಲ್ಲಿ ಸೂಫಿ ಕುರುಹುಗಳು ಸಿಗುತ್ತವೆ. ರಾಜ್ಯದಲ್ಲಿ ಹಿಂದು-ಮುಸ್ಲಿಮ್ ವಿವಾದ ವಾತಾವರಣ ಸೃಷ್ಟಿಸಿದರೆ ನಡೆಯುವುದಿಲ್ಲ. ಕುವೆಂಪು, ಬಸವಣ್ಣನವರು, ಸೂಫಿ ಸಂತರು ಜನಿಸಿದ, ಬಾಳಿದ ರಾಜ್ಯ ನಮ್ಮದು ಎಂದರು.

ಇದು ಭಾರತ ದೇಶ ಸೌಂದರ್ಯ ಮತ್ತು ಸಂಸ್ಕೃತಿಗೆ ಹೆಸರಾಗಿದೆ. ಇದನ್ನು ಮಟ್ಟಹಾಕುವ ಕೆಲಸವನ್ನು ಯಾವುದೇ ಧರ್ಮ ಸಂಘಟನೆಗಳು ಮಾಡಬಾರದು. ಅದನ್ನು ದೇವರು ಹಾಗೂ ರಾಜ್ಯದ ಕನ್ನಡಿಗರು ಸಹಿಸೋದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News