ಎಸೆಸೆಲ್ಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

Update: 2022-05-30 16:43 GMT

ಬೆಂಗಳೂರು, ಮೇ 30: ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸುವ 2022-23ನೆ ಸಾಲಿನ ಎಸೆಸೆಲ್ಸಿ ಪೂರಕ ಪರೀಕ್ಷಾ ದಿನಾಂಕವನ್ನು ವಿಸ್ತರಿಸಲಾಗಿದ್ದು, ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಜೂ.2 ಕೊನೆಯ ದಿನವಾಗಿದೆ. 

ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಜೂ.3ರಿಂದ 6 ಕೊನೆಯ ದಿನವಾಗಿದೆ. ಚಲನ್ ಮುದ್ರಿಸಿಕೊಂಡು ಬ್ಯಾಂಕ್‍ಗೆ ಜಮೆ ಮಾಡಲು ಜೂ.3ರಿಂದ 7, ಪರೀಕ್ಷಾ ಶುಲ್ಕವನ್ನು ಹಳೆಯ ಪದ್ಧತಿಯಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಲು ಜೂ.7 ಕೊನೆಯ ದಿನವಾಗಿದೆ. 

ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನೊಳಗೊಂಡಂತೆ ಶಾಲಾ ಲಾಗಿನ್‍ನಲ್ಲಿ ಸೃಜಿಸಲಾಗುವ ಚಲನ್ ಚಳಸಿಕೊಂಡು ಶುಲ್ಕ ಪಾವತಿಸಿದ ಮೂಲ ಚಲನ್ ಹಾಗೂ 2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ ಎಂಎಸ್‍ಎ ಮತ್ತು ಹಿಂದಿನ ಪದ್ದತಿಯಂತೆ ಮಂಡಳಿ ನೆಫ್ಟ್ ಚಲನ್ ಮೂಲಕ ಶುಲ್ಕ ಪಾವತಿಸಿದ ಮೂಲ ಚಲನ್ ನಾಮಿನಲ್ ರೋಲ್ ಮತ್ತು ಸಂಬಂಧಿಸಿದ ಇತೆ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಲು ಜೂ.10 ಕೊನೆಯ ದಿನವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News