ದಾವಣಗೆರೆ: ಕಳ್ಳತನವಾದ ಕಾರಿನಲ್ಲಿ ಜಾಲಿ ರೈಡ್; ಪೊಲೀಸ್ ಕಾನ್‌ಸ್ಟೆಬಲ್‌ ಅಮಾನತು

Update: 2022-06-09 18:11 GMT

ದಾವಣಗೆರೆ:  ಕಳ್ಳತನವಾದ ಕಾರೊಂದನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಲ್ಲದೆ, ಕಾರು ಮಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರನ್ನು ಅಮಾನತು ಮಾಡಲಾಗಿದೆ.

ತನ್ನ ಕಾರನ್ನು ಸ್ನೇಹಿತನೊಬ್ಬ ಪಡೆದುಕೊಂಡಿದ್ದು,  ಅದನ್ನು ಬಳಸಿಕೊಂಡಿದ್ದಲ್ಲದೆ ಹಣವನ್ನೂ ನೀಡದೆ ವಂಚಿಸಿರುವ ಬಗ್ಗೆ ಇತ್ತೀಚೆಗೆ ಕಾರು ಮಾಲಕ ಗಿರೀಶ್‌ ಅವರು ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರೆ, ಅದೇ ಕಾರು 12 ದಿನಗಳ ಬಳಿಕ ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಗಿರೀಶ್‌ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದರು.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಾನ್‌ಸ್ಟೆಬಲ್‌ ಹಾಗೂ ಕಾರಿನಲ್ಲಿ ಸಂಚರಿಸಿರುವ ಆರೋಪದ ಮೇರೆಗೆ ಹದಡಿ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ಇಲಾಖೆ ತನಿಖೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್ ಆದೇಶಿಸಿದ್ದಾರೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ಇಬ್ಬರ ವಿರುದ್ಧ ದಾವಣಗೆರೆ ಎಸ್ಪಿ  ಕ್ರಮ ಕೈಗೊಂಡಿದ್ದಾರೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News