ಖೇಲೋ ಇಂಡಿಯಾ ಕ್ರೀಡಾಕೂಟ: ಕೊಡಗಿನ ಉನ್ನತಿ ಅಯ್ಯಪ್ಪಗೆ ಚಿನ್ನ

Update: 2022-06-10 11:23 GMT

ಮಡಿಕೇರಿ ಜೂ.10 : ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಬಾಲಕಿಯರ 100 ಮೀಟರ್ಸ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

ಹರಿಯಾಣದ ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಉನ್ನತಿ ಈ ಸಾಧನೆ ಮಾಡಿದ್ದಾರೆ. 100 ಮೀಟರ್ ಹರ್ಡಲ್ಸ್‍ನಲ್ಲಿ 14 ಸೆಕೆಂಡ್‍ಗಳಲ್ಲಿ ಗುರಿ ತಲುಪುವ ಮೂಲಕ ಉನ್ನತಿ ಗಮನ ಸೆಳೆದಿದ್ದಾರೆ. 

ಅಂತರಾಷ್ಟ್ರೀಯ ಅಥ್ಲೆಟ್ ಹಾಗೂ ತರಬೇತುದಾರರಾಗಿರುವ ಮಡಿಕೇರಿಯ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿ ಉನ್ನತಿ ವಿವಿಧ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಭವಿಷ್ಯದ ತಾರೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ಸ್ವತಃ ಪೋಷಕರೇ ಈಕೆಯ ತರಬೇತುದಾರರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News