ಚಾಮರಾಜನಗರ: ಡ್ರೋನ್ ಮೂಲಕ ಹುಲಿ ಪತ್ತೆಗೆ ಯತ್ನ

Update: 2022-06-11 05:10 GMT
ಶೋಧ ಕಾರ್ಯದಲ್ಲಿ ತೊಡಗಿರುವ ಅರಣ್ಯ ಅಧಿಕಾರಿಗಳು

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಬಳಿ ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಹುಲಿಗಾಗಿ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾದೊಂದಿಗೆ ಶೋಧ ಕಾರ್ಯದಲ್ಲಿ ತೊಡಗಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ತಾಳವಾಡಿ ವನ್ಯಜೀವಿಧಾಮದಲ್ಲಿ ಹುಲಿಗಳು ಮತ್ತು ಚಿರತೆಗಳು ವಾಸವಾಗಿದ್ದು, ಕಳೆದ ಕೆಲ ದಿನಗಳಿಂದ ತಾಳವಾಡಿ ವನ್ಯಜೀವಿಧಾಮಕ್ಕೆ ಒಳಪಡುವ ರಾಮಾಪುರ, ಸಾಸನನಗರ ಸೇರಿದಂತೆ ಭಾಗದಲ್ಲಿ ಅರಣ್ಯ ತೊರೆದಿರುವ ಏಕಾಂಗಿ ಹುಲಿಗಳನ್ನು ನಿರಂತರವಾಗಿ ಬೇಟೆಯಾಡಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಇದರಿಂದ ಆ ಭಾಗದ ಜನರು ಭಯಭೀತರಾಗಿ ಹುಲಿ ಸೆರೆಗೆ ಬೋನಿನಲ್ಲಿ ಇಡುವಂತೆ ಒತ್ತಾಯಿಸಿದರು.

ಸದ್ಯ ತಾಳವಾಡಿ ಅರಣ್ಯ ಇಲಾಖೆ ಹುಲಿಗಾಗಿ ಡ್ರೋನ್ ಕ್ಯಾಮರಾ ಮೂಲಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಹುಲಿ ಪತ್ತೆ ಹಾಗೂ ಸೆರೆ ಕಾರ್ಯ ಚುರುಕಾಗಿ ನಡೆಯುತ್ತಿರುವುದರಿಂದ ಈ ಭಾಗದ ಸಾರ್ವಜನಿಕರು ಹೊರಗೆ ಅಲೆದಾಡದಂತೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News