ದಾವಣಗೆರೆ: ಮೊಮ್ಮಗುವನ್ನೇ ಮಾರಾಟ ಮಾಡಿದ ಅಜ್ಜ!

Update: 2022-06-11 12:21 GMT
ಸಾಂದರ್ಭಿಕ ಚಿತ್ರ

ದಾವಣಗೆರೆ: ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ. 

ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜೂನ್ 2ರಂದು ಸುಚಿತ್ರ ತಂದೆ ಬಸಪ್ಪ (55) ಎಂಬುವರು ತನ್ನ ಪುತ್ರಿಯ ಗಂಡು ಮಗುವನ್ನು ಭೀಮವ್ವ ಹಾಲೇಶ್ ಎಂಬುವರಿಗೆ 60 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಪರಶುರಾಮ್ ಎಂಬ ವ್ಯಕ್ತಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಸ್ವಂತ ಅಜ್ಜನೇ 60 ಸಾವಿರ ರೂ.ಗೆ ಹಸುಗೂಸನ್ನು ಮಾರಾಟ ಮಾಡಿದ್ದ ಪ್ರಕರಣ ವರದಿಯಾಗಿತ್ತು. ಈ ಸಂಬಂಧ 24 ಗಂಟೆಯಲ್ಲೇ ಮಗುವನ್ನು ಸುರಕ್ಷಿತವಾಗಿ ಪತ್ತೆ ಮಾಡಿ, ಮಗು ಮಾರಾಟಕ್ಕೆ ಮಧ್ಯವರ್ತಿಯಾಗಿದ್ದಯವನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಗರದ ಹೊರ ವಲಯದ ನಾಗಮ್ಮ ಕೇಶವಮೂರ್ತಿ ಬಡಾವಣೆ ನಿವಾಸಿ ಬಸಪ್ಪ ಎಂಬ ವೃದ್ಧ ತನ್ನ ಮಗಳಾದ ಸುಜಾತರ 2ನೇ ಗಂಡು ಮಗುವನ್ನು 60 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಬಸಪ್ಪನು ತನ್ನ ಮೊಮ್ಮಗುವನ್ನು ಮಾರಾಟ ಮಾಡಲು ಎಗ್ರೈಸ್ ಪರಶುರಾಮ ಎಂಬಾತ ಮಧ್ಯವರ್ತಿಯಾಗಿ, 60 ಸಾವಿರ ರೂ.ಗಳಿಗೆ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿಸಿದ್ದನು ಎಂದು ತಿಳಿಸಿದರು.

ಹಣದ ಆಸೆಗೆ ಬಿದ್ದ ವೃದ್ಧ ಬಸಪ್ಪ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ನವಲೆ ಗ್ರಾಮದ ಭೀಮವ್ವ, ಹಾಲಪ್ಪ ಎಂಬ ದಂಪತಿಗೆ ಮಾರಾಟ ಮಾಡಿದ್ದನು. ಮಕ್ಕಳಿಲ್ಲದ ನವಲೆ ಗ್ರಾಮದ ದಂಪತಿಯು ವೃದ್ಧ ಬಸಪ್ಪನಿಂದ ಕೂಸನ್ನು ದತ್ತು ಪಡೆದಿದ್ದರು. ಹಸುಗೂಸು ಮಾರಾಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚುರುಕಾದ ಲೀಸರು ಮಧ್ಯವರ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News