ನಾರಾಯಣ ಗುರುಗಳ ಆದರ್ಶ ಇಂದಿಗೂ ಪ್ರಸ್ತುತ: ದಿನೇಶ್ ಅಮಿನ್ ಮಟ್ಟು

Update: 2022-06-14 16:50 GMT

ಶಿವಮೊಗ್ಗ, ಜೂ.14: ಜನಸಮುದಾಯದಿಂದ ದೂರ ಉಳಿದು ಒರಟು ವಿಚಾರವಾದದಿಂದ ಧರ್ಮವನ್ನು ವಿಶ್ಲೇಷಣೆ ಮಾಡುವುದರಿಂದ ಸಮಾಜದ ಮೂಲ ಬದಲಾವಣೆ ಸಾಧ್ಯವಿಲ್ಲ ಎಂಬುದು ನಾರಾಯಣ ಗುರುಗಳ ಆದರ್ಶವಾಗಿದ್ದು ಇಂದಿಗು ಪ್ರಸ್ತುತ ವಾಗಿದೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು. 

ಸಾಗರ ತಾಲೂಕಿನ ತುಮರಿ ಸಮೀಪದ ಸಿಂಗದೂರು ದೇವಸ್ಥಾನದ ಸಭಾಂಗಣದಲ್ಲಿ ಹಳೆಪೈಕಿ ದೀವರ ಸಾಂಸ್ಕೃತಿಕ ವೇದಿಕೆ ಮತ್ತು ಸಿಗಂದೂರೇಶ್ವರಿ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಎರಡುದಿನಗಳ ನಾರಾಯಣ ಗುರು ವಿಚಾರ ಕಮ್ಮಟದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಆಶಯ ನುಡಿಗಳನ್ನು ಮಾತನಾಡಿದರು, ಧರ್ಮದಿಂದ ದೂರ ಉಳಿಯುವುದೆಂದರೆ ಅದು ನಮ್ಮ ಸುತ್ತಲಿನಲ್ಲಿ ಧರ್ಮದ ಹೆಸರಿನಲ್ಲಿ ಬಹುಮುಖಿ  ಶೋಷಣೆಗೆ ಬೆನ್ನು ತಿರುಗುವುದೇ ಸರಿ , ಈ ಕರಣಕ್ಕೆ ಧರ್ಮದ ಮರು ವ್ಯಾಖ್ಯಾನ ಅಗತ್ಯ ಇದ್ದು ನಾರಾಯಣ ಗುರುಗಳು ಶತಮಾನದ ಹಿಂದೆಯೇ ಅಂತಯ ಮಾರ್ಗವನ್ನು ತೋರಿಸಿದರು ಎಂದು ವಿಶ್ಲೇಸಿದರು. 

ನಾರಾಯಣ ಗುರುಗಳು ಆಧ್ಯಾತ್ಮಿಕತೆಯ ಜೊತೆ ಜೊತೆಯಲ್ಲಿ ಸಮಾಜದ ರಚನೆಯನ್ನ ಸರಿಯಾಗಿ ಅರ್ಥ ಮಾಡಿಕೊಂಡು ಅದು ಧರ್ಮದ ಜೊತೆಗೆ ಇರುವ ಸಂಬಂಧವನ್ನ ಮನಗೊಂಡು ದೇವರನ್ನು ನಿರಾಕರಿಸದೆ ಪರ್ಯಾಯ ದೇವರನ್ನ ಹುಟ್ಟು ಹಾಕಿದರು ಎಂದು ವಿವರಿಸಿದರು.

ನಾರಾಯಣ ಗುರುಗಳು ಧರ್ಮವನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡುವ ಜೊತೆಗೆ ಎಂದಿಗೂ ಕೂಡ ಅವರು ಅನ್ಯಧರ್ಮಗಳ ವಿರುದ್ಧ ದ್ವೇಷ ಕಾರುವ ಅಸಹನೆಯನ್ನು ಭಿತ್ತಲಿಲ್ಲ , ತನ್ನ ಎದುರೇ ಇದ್ದ ಮುಸ್ಲಿಮ್ , ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಟೀಕಿಸದೆ ತನ್ನ ಸುತ್ತಲೂ ಇರುವ ತಳಸಮುದಾಯಗಳ ಬಗ್ಗೆ ತಾಯಿ ಮಮತೆಯ ಪ್ರೀತಿಯನ್ನು ಕಾಯ್ದುಕೊಂಡು ಅವರ ವಿಮೋಚನೆಗೆ ಅವರೊಡನೆಯೇ ಇದ್ದು ಪರ್ಯಾಯ ದಾರಿಯನ್ನು ಹುಡುಕುವ  ಮನುಷ್ಯ ಪರವಾಗಿ ಚಳವಳಿಯನ್ನು ಕಟ್ಟಿದರು ಎಂದರು. 

ನಾರಾಯಣ ಗುರುಗಳ ಚಿಂತನೆಗಳನ್ನು ಆಳವಾಗಿ ಇಳಿಸಿಕೊಂಡ ಕೇರಳ ರಾಜ್ಯವು ತನ್ನ ಒಳಗಡೆ ಕೋಮುವಾದಕ್ಕೆ ಅವಕಾಶವಿಲ್ಲದ ಪರ್ಯಾಯ ರಾಜಕಾರಣವನ್ನು ಇಡೀ ದೇಶಕ್ಕೆ ನೀಡಿದ್ದರೆ ಮಲಯಾಳಂ ಚಿತ್ರರಂಗವು ನಾರಾಯಣ ಗುರುಗಳ ಚಿಂತನೆಗಳಿಂದ ಪ್ರಭಾವಿತರಾಗಿ ಇಂದು ಭಿನ್ನ ಅಭಿರುಚಿಯ ಚಿತ್ರ ನಿರ್ಮಾಣದ ಮುಖಾಂತರ ಪ್ರಪಂಚದ ಚಿತ್ರರಂಗದ ಎದುರು ಗಟ್ಟಿಯಾಗಿ ನಿಂತಿದೆ ಎಂದು ವಿಶ್ಲೇಷಿಸಿದರು.

ನಾರಾಯಣ ಗುರುಗಳಿಂದ ಪ್ರಭಾವಿತವಾದ ಕರ್ನಾಟಕದ ಕರಾವಳಿ ತೀರವು ಇಂದು ಕೋಮುವಾದದ ಪ್ರಯೋಗಾಲಯವಾಗಿದ್ದು ಬಹುಸಂಖ್ಯಾತ ಬಿಲ್ಲವ ಸಮುದಾಯ ರಾಜಕೀಯ ಪ್ರಾತಿನಿದ್ಯ ಕಳೆದುಕೊಂಡಿದ್ದು ಈ ಸ್ಥಿತಿಗೆ ತಲುಪಲು ನಾರಾಯಣಗಳಿಂದ ಬೌದ್ದಿಕ ವಾಗಿ ದೂರ ಉಳಿದಿರುವುದೇ ಕಾರಣವಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ಮತ್ತೊಮ್ಮೆ ನಾರಾಯಣ ಗುರುಗಳನ್ನು ಅಂತರಂಗದೊಳಗೆ ಸ್ವೀಕರಿಸುವುದೇ ಮಾರ್ಗವಾಗಿದೆ ಎಂದರು.

ಕೇವಲ ದೇವರೊಂದೇ ಸಾಲದು ಜೊತೆಗೆ ಶಿಕ್ಷಣದ ವಿವೇಕ ಅಗತ್ಯ ಎಂಬುದನ್ನು ಮನಗೊಂಡು ದೇವಸ್ಥಾನವನ್ನು ಕಟ್ಟುವುದರ ಜೊತೆಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನ ಕಟ್ಟುವ ಚಳುವಳಿಯನ್ನ ಮುಂದುವರೆಸಿದರು ಈ ಹಿನ್ನಲೆಯಲ್ಲಿ ಧರ್ಮ ಎಂದರೆ ನಮ್ಮೊಳಗಿನ ನಮ್ಮನ್ನು ಹುಡುಕುತ್ತಾ ಧರ್ಮವನ್ನ ತಿದ್ದುವ ವಿಕಾಸ ಎಂಬುದು ಅವರ ನಿಲುವಾಗಿತ್ತು ಈ ಕಾರಣದಿಂದಲೆ ಸರಳ ವಿವಾಹ, ಮತ್ತು ಆರ್ಥಿಕ ಚೈತನ್ಯದ ಬಗ್ಗೆ ಯೋಜನೆ ರೂಪಿಸಿದರು.

ತತ್ವವನ್ನು ಜಾರಿಗೊಳಿಸುವುದು ಎಂದರೆ ಅದೊಂದು ಸಿದ್ದತೆಯ ಜೀವನ ಕ್ರಮ ನಾರಾಯಣ ಗುರುಗಳು ನಿತ್ಯ ಬದುಕಿಗೆ ಹತ್ತಿರದ ಮಾರ್ಗದಲ್ಲಿ ಧರ್ಮವನ್ನು ಉಪದೇಶ ಮಾಡಿದ್ದು ಅದರ ಪಾಲನೆಯಿಂದ ಪ್ರಸ್ತುತದ ಕೋಮು ವಾದದ ವಿದ್ಯಮಾನಗಳಿಗೆ ಔಷದಿ ಹುಡುಕಬಹುದು ಎಂದು ವಿವವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಿಗಂದೂರಿನ‌ ಧರ್ಮದರ್ಶಿಗಳಾದ ರಾಮಪ್ಪನವರು ಆಧುನಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರುಪಯೋಗಗಳು ಹೆಚ್ಚಾಗುತ್ತಿದ್ದು ಸಾಮಾಜಿಕ ಜಾಲತಾಣಗಳನ್ನ ಧರ್ಮ ಧರ್ಮಗಳ ನಡುವೆ ಅಸಹನೆ ಸೃಷ್ಟಿಸುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದ್ದು ಇಂತಹ ಕಮ್ಮಟಗಳು ಪರ್ಯಾಯ ಚಿಂತನೆಯನ್ನು ಸಮಾಜದಲ್ಲಿ ಮೂಡಿಸಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೋಹನ್ ಚಂದ್ರಗುತ್ತಿ ದೀವರು ಹಳೆಪೈಕ ಸಾಂಸ್ಕೃತಿಕ ವೇದಿಕೆಯು ಕಳೆದ ಎರಡು ವರ್ಷಗಳಿಂದ ವ್ಯಾಟ್ಸ್ ಆಪ್ ಗುಂಪಿನ ಮುಖಾಂತರ ಇಂದು ವಿಚಾರ ಸಂಕೀರ್ಣವನ್ನು ಸಂಘಂಟಿಸಿದೆ ಮುಂದಿನ ದಿನಗಳಲ್ಕಿ ಇದರ ಕಾರ್ಯಚಟುವಟಿಕೆಯನ್ನು ವಿಸ್ತರಿಸಲಾಗುವುದು ಎಂದರು.

ನಾಗರಾಜ ನೇರಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದು ಶಿಕ್ಷಕಿ ಅನ್ನಪೂರ್ಣ ಕಾರ್ಯಕ್ರಮ ಸ್ವಾಗತಿಸಿದರು 
ನವೀನ್ ಮಂಡಗದ್ದೆ ನಿರೂಪಿಸಿ ಶಿಕ್ಷಕ ರವಿರಾಜ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News