ಉಳ್ಳಾಲ ನಗರ ಸಭಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ: ಶಾಸಕ ಯು.ಟಿ.ಖಾದರ್‌ರನ್ನು ಭೇಟಿಯಾದ ಎಸ್‌ಡಿಪಿಐ ನಿಯೋಗ

Update: 2022-06-15 13:19 GMT

ಮಂಗಳೂರು, ಜೂ.15: ಉಳ್ಳಾಲ ನಗರಸಭಾ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ, ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ನೇತೃತ್ವದ ಪಕ್ಷದ ನಗರಸಭಾ ಕೌನ್ಸಿಲರ್ ಮತ್ತು ಸ್ಥಳೀಯ ನಾಯಕರ ನಿಯೋಗವು ಶಾಸಕ ಯು.ಟಿ. ಖಾದರ್ ಅವರನ್ನು ನಗರದ ಮಲ್ಲಿಕಟ್ಟೆಯ ಪ್ರವಾಸಿ ಮಂದಿರದಲ್ಲಿ ಭೇಟಿಯಾಯಿತು.

ವೇಗವಾಗಿ ಬೆಳೆಯುತ್ತಿರುವ ಉಳ್ಳಾಲ ನಗರವನ್ನು ಭವಿಷ್ಯದ ದಿನಗಳಲ್ಲಿ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಅಡೆತಡೆಗಳು ಉಂಟಾಗದ ರೀತಿಯಲ್ಲಿ ಸಮಗ್ರವಾದ ಕಾರ್ಯಯೋಜನೆಗಳನ್ನು ಹಾಕಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಯೋಜನೆಗಳನ್ನು ರೂಪಿಸಬೇಕು, ಸರಕಾರದಿಂದ ಬರುವ ಎಲ್ಲಾ ನಿಧಿಗಳನ್ನ ಸದ್ವಿನಿಯೋಗ ಮಾಡಬೇಕು, ಇತ್ತೀಚೆಗೆ ನಗರೋತ್ಥಾನ ನಿಧಿಯಲ್ಲಿ ಉಳ್ಳಾಲ ನಗರಸಭೆಗೆ ಬಿಡುಗಡೆಯಾದ 30 ಕೋ.ರೂ. ಅನುದಾನವನ್ನು ಯಾವುದೇ ತಾರತಮ್ಯ ಮಾಡದೆ ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಹಂಚಬೇಕು ಎಂದು ನಿಯೋಗವು ಒತ್ತಾಯಿಸಿದೆ.

ಈ ಸಂದರ್ಭ ಉಳ್ಳಾಲ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಉಪಸ್ಥಿತರಿದ್ದರು. ಪಕ್ಷದ ಮುಖಂಡರಾದ ಅಕ್ರಮ್ ಹಸನ್, ಅಬ್ಬಾಸ್ ಎಆರ್, ಸುಹೈಲ್ ಉಳ್ವಾಲ, ರವೂಫ್ ಉಳ್ಳಾಲ ಹಾಗೂ ಎಸ್‌ಡಿಪಿಐ ಪಕ್ಷದ ಕೌನ್ಸಿಲರ್‌ಗಳು ಮತ್ತಿತರರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News