ವಿಧಾನಪರಿಷತ್‍ನ ದಕ್ಷಿಣ ಪದವೀಧರ ಕ್ಷೇತ್ರ: ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ

Update: 2022-06-15 15:07 GMT

ಮೈಸೂರು,ಜೂ.15: ವಿಧಾನ ಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಮುನ್ನಡೆ ಸಾಧಿಸಿದ್ದಾರೆ.

ನಗರದ ಮೈಸೂರು-ಹುಣಸೂರು ರಸ್ತೆಯ ಪಡುವಾರಹಳ್ಳಿಯಲ್ಲಿರುವ ಮಹರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಚುನಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.

ಬಳಿಕ ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ  ಪೆಟ್ಟಿಗೆಯನ್ನು ತೆಗೆದು ಒಂದು ಟೇಬಲ್‍ಗೆ  3 ಸಾವಿರ ದಂತೆ  ಬೇರೆ ಬೇರೆ ಬಂಡಲ್ ಗಳನ್ನು ಮಾಡಿ 28 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತಿದೆ. 

ಮೊದಲಿಗೆ ಅಂಚೆ ಮತದಾನ ಎಣಿಕೆ ನಂತರ ಕುಲಗೆಟ್ಟ ಮತಗಳನ್ನು ವಿಂಗಡಿಸಿ ಎಣಿಕೆ ನಡೆಸಲಾಗುತ್ತಿದೆ. ಅಂಚೆ ಮತದಾನದಲ್ಲಿ 176 ಮತಗಳು ಬಂದಿದ್ದು, ಇದರಲ್ಲಿ ಒಂದು ಮತ ತಿರಸ್ಕೃತಗೊಂಡಿದೆ. 

ಇದರಲ್ಲಿ ಕಾಂಗ್ರೆಸ್ 63, ಬಿಜೆಪಿ 60, ಜೆಡಿಎಸ್ 43, ಬಿಎಸ್ಪಿ ಬೆಂಬಲಿತ4, ರೈತ ದಲಿತ ಸಂಘರ್ಷ ಬೆಂಬಲಿತ 2, ಪಕ್ಷೇತರ 3 ಮಗಳು ಬಂದಿವೆ.

ಮುನ್ನಡೆ:  ಇಂದು ರಾತ್ರಿ  8 ಗಂಟೆ ವೇಳೆಗೆ ಮೊದಲ ಪ್ರಾಶಸ್ತ್ಯದಲ್ಲಿ 49,700 ಮತಗಳ ಎಣಿಕೆ ಮುಗಿದಿದ್ದು, ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರಿಗೆ 16,137 ಮತಗಳು ಬಂದರೆ, ಬಿಜೆಪಿ ಯ ಮೈ.ವಿ.ರವಿಶಂಕರ್ ಅವರಿಗೆ 13,479 ಮತಗಳು ಮತ್ತು ಜೆಡಿಎಸ್ ನ ಎಚ್.ಕೆ.ರಾಮು ಅವರಿಗೆ 08512 ಮತಗಳು ಲಭಿಸಿವೆ.

ಒಟ್ಟು 19 ಮಂದಿ ಕಣದಲ್ಲಿದ್ದು, ಮೊದಲ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ.ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು.ಜಿ. ಮಾದೇಗೌಡ ಮುನ್ನಡೆ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News