ದ್ವಿತೀಯ ಪಿಯುಸಿ ಫಲಿತಾಂಶ: ಮೈಸೂರಿನ ಸದ್ವಿದ್ಯಾ ಕಾಲೇಜಿನ ಮೂವರು ವಿದ್ಯಾರ್ಥಿಗಳು ಟಾಪರ್

Update: 2022-06-18 18:33 GMT

ಮೈಸೂರು,ಜೂ.18: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರಿನ ಸದ್ವಿದ್ಯಾ ಕಾಲೇಜಿನ ವಿಜ್ಞಾನ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು, ವಾಣಿಜ್ಯ ವಿಭಾಗದ ಓರ್ವ ವಿದ್ಯಾರ್ಥಿನಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದು, ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಮೂವರನ್ನೂ ಅಭಿನಂದಿಸಿದೆ.

ವಿಜ್ಞಾನ ವಿಭಾಗದ ಪರಿಣಿತ ಎಂ.ಎಸ್ ಇವರು 600ಕ್ಕೆ 592 ಅಂಕ ಪಡೆದಿದ್ದು, ಭೌತಶಾಸ್ತ್ರ 100  100, ರಸಾಯನಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 100, ಸಂಸ್ಕೃತ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಫೈಝಾಹ್ ರಫತ್ 600ಕ್ಕೆ 592 ಅಂಕಪಡೆದಿದ್ದು ಭೌತಶಾಸ್ತ್ರ 100, ರಸಾಯನಶಾಸ್ತ್ರ 100, ಗಣಿತಕ್ಕೆ 100ಕ್ಕೆ 100 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದ ದೀಕ್ಷಾ .ವಿ. ಶಾಹ್  600ಕ್ಕೆ 587 ಅಂಕ ಪಡೆದಿದ್ದು ಅಕೌಂಟೆನ್ಸಿ 100, ಸ್ಟೆಟಿಸ್ಟಿಕ್ಸ್ 100, ಬೇಸಿಕ್ ಮ್ಯಾಥ್ಸ್ 100ಕ್ಕೆ 100 ಅಂಕ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News