ಸ್ಪೈಸ್ ಜೆಟ್ ವಿಮಾನದ ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ: ಪಾಟ್ನಾದಲ್ಲಿ ಸುರಕ್ಷಿತ ಲ್ಯಾಂಡಿಂಗ್

Update: 2022-06-19 08:30 GMT
ಸಾಂದರ್ಭಿಕ ಚಿತ್ರ, Photo:PTI

ಪಾಟ್ನಾ: ದಿಲ್ಲಿಗೆ ಹೊರಟಿದ್ದ 185 ಪ್ರಯಾಣಿಕರನ್ನು ಹೊತ್ತ ಸ್ಪೈಸ್‌ ಜೆಟ್ ವಿಮಾನದ ಎಡ ಭಾಗದ ಇಂಜಿನ್‌ಗೆ ಹಕ್ಕಿವೊಂದು ಡಿಕ್ಕಿ ಹೊಡೆದ ಪರಿಣಾಮ  ಬೆಂಕಿ ಹೊತ್ತಿಕೊಂಡಿದ್ದು, ವಿಮಾನ   ಟೇಕ್ ಆಫ್ ಆದ ತಕ್ಷಣ ಪಾಟ್ನಾದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರು ಚಿತ್ರೀಕರಿಸಿದ ವೀಡಿಯೊದಲ್ಲಿ ಎಡ ಭಾಗದ ಇಂಜಿನ್‌ನಿಂದ ಬೆಂಕಿ ಕಿಡಿ ಹೊರಬರುತ್ತಿರುವುದು ಕಂಡುಬಂದಿದೆ.

ಪಕ್ಷಿ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಹೀಗೆ ಆದಾಗ ಎಂಜಿನ್ ನಲ್ಲಿ  ಬೆಂಕಿಗೆ ಕಾಣಿಸಿಕೊಳ್ಳುತ್ತದೆ. ಪೈಲಟ್‌ಗಳು ಎಂಜಿನ್ ಅನ್ನು ಸ್ಥಗಿತಗೊಳಿಸಿದರು ಹಾಗೂ  ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು ಎಂದು ವಿಮಾನ ನಿಯಂತ್ರಕ ಡಿಜಿಸಿಎ ಮೂಲಗಳು ತಿಳಿಸಿವೆ.

ಘಟನೆಯಿಂದ ಯಾವುದೇ ಗಾಯದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಸ್ಥಳೀಯರು ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನುಗಮನಿಸಿ  ಜಿಲ್ಲಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ದಿಲ್ಲಿಗೆ ಹೊರಟಿದ್ದ ವಿಮಾನವು ಪಾಟ್ನಾ ವಿಮಾನ ನಿಲ್ದಾಣಕ್ಕೆ ಮರಳಿದೆ. ಎಲ್ಲಾ 185 ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು'' ಎಂದು ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News