ಪತ್ರಕರ್ತೆಯರಾದ ಐಶ್ವರ್ಯಾ ಐಯ್ಯರ್‌, ಇಸ್ಮತ್‌ ಅರಾಗೆ HRF ಯಂಗ್‌ ಜರ್ನಲಿಸ್ಟ್‌ ಆಫ್‌ ದಿ ಇಯರ್‌ ಪ್ರಶಸ್ತಿ

Update: 2022-06-20 07:04 GMT

ಹೊಸದಿಲ್ಲಿ: ಸುದ್ದಿ ತಾಣ Scroll.in ನ ಪತ್ರಕರ್ತೆ ಐಶ್ವರ್ಯಾ ಐಯ್ಯರ್‌ ಹಾಗೂ thewire.in ಸುದ್ದಿತಾಣದ ಇಸ್ಮತ್‌ ಅರಾ ಅವರು  ಹ್ಯೂಮನ್‌ ರೈಟ್ಸ್‌ ಎಂಡ್‌ ರಿಲಿಜಿಯಸ್‌ ಫ್ರೀಡಂ ಯಂಗ್‌ ಜರ್ನಲಿಸ್ಟ್‌ ಆಫ್‌ ದಿ ಇಯರ್‌ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಇಂಡಿಯನ್‌ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌  ಈ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ.

ನ್ಯೂಸ್‌ಲಾಂಡ್ರಿ ವೆಬ್ ತಾಣದ ಆಕಾಂಕ್ಷಾ ಕುಮಾರ್‌ ಅವರು ಬೆಸ್ಟ್‌ ಟೆಕ್ಸ್ಟ್‌ ರಿಪೋರ್ಟಿಂಗ್‌  ಆನ್‌ ಹ್ಯೂಮನ್‌ ರೈಟ್ಸ್‌ ಎಂಡ್‌ ರಿಲಿಜಿಯಸ್‌ ಫ್ರೀಡಂ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ ನ್ಯೂಸ್‌ ಮಿನಿಟ್‌ನ ಪ್ರಿಯಾಂಕ ತಿರುಮೂರ್ತಿ ಮತ್ತು ದಿ ಕ್ಯಾರವಾನ್‌ ನ ಶಾಹಿದ್‌ ತಂತ್ರಯ್‌ ಅವರು ಬೆಸ್ಟ್‌ ವೀಡಿಯೋ ಸ್ಟೋರಿ ಆನ್‌ ಹ್ಯೂಮನ್‌ ರೈಟ್ಸ್‌ ಎಂಡ್‌ ರಿಲಿಜಿಯಸ್‌ ಫ್ರೀಡಂ ಪ್ರಶಸ್ತಿ ಪಡೆದಿದ್ದಾರೆ

ದಿ ನ್ಯೂ ಇಶ್ಯೂ ಮ್ಯಾಗಝಿನ್‌ ಯುಕೆ ಇದರ ಸಯ್ಯದ್‌ ಶಹರಿಯಾರ್‌ ಅವರು ಬೆಸ್ಟ್‌ ಫೋಟೋ ಸ್ಟೋರಿ ಆನ್‌ ಹ್ಯೂಮನ್‌ ರೈಟ್ಸ್‌ ಎಂಡ್‌ ರಿಲಿಜಿಯಸ್‌ ಫ್ರೀಡಂ ಪ್ರಶಸ್ತಿ ಗಳಿಸಿದ್ದಾರೆ.

ಆರ್ಟಿಕಲ್‌ 14 ಮತ್ತು ದಿ ಮೂಕನಾಯಕ್‌ ಜಂಟಿಯಾಗಿ ಬೆಸ್ಟ್‌ ಮೀಡಿಯಾ ಆರ್ಗನೈಝೇಶನ್‌ ಕವರಿಂಗ್‌ ಹ್ಯೂಮನ್‌ ರೈಟ್ಸ್‌ ಎಂಡ್‌ ರಿಲಿಜಿಯಸ್‌ ಫ್ರೀಡಂ ಜರ್ನಲಿಸಂ ಪ್ರಶಸ್ತಿ ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News