ಈದ್ಗಾ ಮೈದಾನದಲ್ಲಿ ಯೋಗ ಆಚರಣೆಗೆ ಅನುಮತಿ ಇಲ್ಲ: ಬಿಬಿಎಂಪಿ

Update: 2022-06-20 11:53 GMT

ಬೆಂಗಳೂರು, ಜೂ.20: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಸಂಬಂಧ ಈದ್ಗಾ ಮೈದಾನದಲ್ಲಿ ಇಂದು(ಜೂ.21) ಯೋಗ ದಿನಾಚರಣೆ ಆಚರಣೆಗೆ ಅನುಮತಿ ನೀಡಲು ಬಿಬಿಎಂಪಿ ಮುಂದಾಗಿಲ್ಲ ಎಂದು ವರದಿಯಾಗಿದೆ.

ಈ ಬಾರಿ ಯೋಗ ದಿನಾಚರಣೆ ಆಚರಣೆಗಾಗಿ ಹಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಗೆ ಮನವಿ ಪತ್ರ ನೀಡಿ, ಅನುಮತಿ ನೀಡುವಂತೆ ಕೋರಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈದ್ಗಾ ಮೈದಾನದಲ್ಲಿ ಅನುಮತಿ ನೀಡುವುದಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಈಗಾಗಲೇ ಬಿಬಿಎಂಪಿಗೆ ವಕ್ಫ್ ಬೋರ್ಡ್ ಮೈದಾನ ಹಕ್ಕುಗಳ ಕುರಿತು ಅಧಿಕೃತ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದು, ಇದನ್ನು ಬಿಬಿಎಂಪಿಯ ಕಾನೂನು ವಿಭಾಗಕ್ಕೆ ರವಾನೆ ಮಾಡಲಾಗಿದೆ.

ಕಾನೂನು ಇಲಾಖೆಯಿಂದ ವರದಿ ಬರಲು ಇನ್ನೂ ಒಂದು ವಾರ ಬೇಕು. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News