ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಗಾರನಲ್ಲ: ಹೈಕೋರ್ಟ್

Update: 2022-06-21 14:41 GMT

ಬೆಂಗಳೂರು, ಜೂ.21: ಕಟ್ಟಡ ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಗಾರನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.      

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಆರ್ಕಿಟೆಕ್ಟ್ ವಿಶ್ವಾಸ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಆರ್ಕಿಟೆಕ್ಟ್ ವಿರುದ್ಧ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಗೊಳಿಸಿ ಆದೇಶಿಸಿದೆ.

ಆರ್ಕಿಟೆಕ್ಟ್ ಕೊಟ್ಟಿದ್ದ ನೀಲನಕ್ಷೆಯಲ್ಲಿನ ಲೋಪದಿಂದಾಗಿ ಕಟ್ಟಡ ಕಾರ್ಮಿಕ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸರು, ವಿಶ್ವಾಸ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದ್ದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು, ಕಟ್ಟಡ ನಕ್ಷೆ ರೂಪಿಸುವುದು ನಿರ್ಲಕ್ಷ್ಯವಾಗುವುದಿಲ್ಲ. ನಿರ್ಲಕ್ಷ್ಯದಿಂದಾಗಿ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ ಎಂದು ಆದೇಶಿಸಿ, ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News