'ಅಗ್ನಿಪಥ್' ಯೋಜನೆ ಹಿಂಪಡೆಯಲು ಯುವಕರು ಏನು ಪಾವತಿಸಬೇಕು?: ಮಲ್ಲಿಕಾರ್ಜುನ ಖರ್ಗೆ

Update: 2022-06-21 15:34 GMT
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜೂ.21: 2020ನೆ ಸಾಲಿನ ಡಿಸೆಂಬರ್ ನಲ್ಲಿ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದಿಲ್ಲ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರ, 2021ರ ನವೆಂಬರ್ ನಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿತು. ಇದಕ್ಕಾಗಿ 700ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಳ್ಳಬೇಕಾಯಿತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 2022ನೆ ಸಾಲಿನ ಜೂನ್‍ನಲ್ಲಿ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಲಾಗುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ, ನಮ್ಮ ಯುವಕರು ಏನು ಪಾವತಿಸುವಂತೆ ಮಾಡುತ್ತಾರೋ ಪ್ರಧಾನಿ ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರಕಾರದಲ್ಲಿ ಭಾರತೀಯ ಸೇನೆಯ ನೇಮಕಾತಿ: 2015-16ರಲ್ಲಿ 71,804, 2016-17ರಲ್ಲಿ 52,447, 2017-18ರಲ್ಲಿ 50,026, 2018-19ರಲ್ಲಿ 53,431, 2019-20ರಲ್ಲಿ 80,572, 2020-21ರಲ್ಲಿ ಶೂನ್ಯ, 2021-22ರಲ್ಲಿ ಶೂನ್ಯ. ಎರಡು ವರ್ಷಗಳಿಂದ ನೇಮಕಾತಿ ನಡೆಸದೆ, ಈಗ ಅಗ್ನಿಪಥ್ ಮೂಲಕ ಕೇವಲ 40 ಸಾವಿರ ಮಂದಿಯ ನೇಮಕಾತಿ ನಡೆಸಲಾಗುತ್ತಿದೆ. ಮುಂದಿನ 2 ವರ್ಷಗಳ ಕಾಲ ನೇಮಕಾತಿ ಇಲ್ಲ ಎಂದು ಹೇಳಲಾಗುತ್ತಿದೆ. ಆಕಾಂಕ್ಷಿಗಳ ಕೋಪವನ್ನು ನೀವು ನಿಜವಾಗಿಯೂ ಪ್ರಶ್ನಿಸಬಹುದೇ ಮೋದಿಜಿ? ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಆಡಳಿತದಂತೆ ಈ ಹಿಂದೆ ಭಾರತೀಯ ಸಶಸ್ತ್ರ ಪಡೆಗಳನ್ನು ಯಾರು ಅವಮಾನಿಸಿಲ್ಲ. ಅತ್ಯಂತ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಅತ್ಯಂತ ಕಷ್ಟಕರವಾದ ಭೂಪ್ರದೇಶಗಳಲ್ಲಿ ದೇಶವನ್ನು ರಕ್ಷಿಸಲು ಜೀವಿಸುವ ಶಕ್ತಿಯು ಈಗ ಖಾಸಗಿ ಕಂಪನಿಗಳಿಗೆ ತರಬೇತಿ ಕೇಂದ್ರಗಳಾಗಿ ಸಮೀಕರಿಸಲ್ಪಟ್ಟಿದೆ ಮತ್ತು ಬಳಸಲಾಗುತ್ತಿದೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News