ಮೈಸೂರು: ಡಿಜಿಟಲ್ ಯೋಗ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Update: 2022-06-21 17:10 GMT

ಮೈಸೂರು,ಜೂ.21: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರದಾನಿ ನರೇಂದ್ರ ಮೋದಿ ವಸ್ತು ಪ್ರದರ್ಶನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಿಜಿಟಲ್ ಯೋಗ ಕೇಂದ್ರವನ್ನು ಉದ್ಘಾಟಿಸಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಮಂಗಳವಾರ ಆಯುಷ್ ಇಲಾಖೆ ವತಿಯಿಂದ  ಯೋಗಕ್ಕೆ ಸಂಬಂಧಪಟ್ಟ ಮಾಹಿತಿಯ ಪ್ರಾತ್ಯಕ್ಷಿಕೆ ಒಳಗೊಂಡ ಡಿಜಿಟಲ್ ಮಳಿಗೆಯನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿ ವೀಕ್ಷಿಸಿದರು.

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ಯೋಗ, ಜೀವನ ಶೈಲಿ, ಆರೋಗ್ಯಯುತ ಬದುಕು, ವಿಶ್ರಾಂತಿ, ವ್ಯಾಯಾಮ ಹೀಗೆ ಹಲವು ಮಾಹಿತಿ. ಹಾಗೆಯೇ ಮಹಾವೀರ, ಗೌತಮ ಬುದ್ಧ, ಆದಿ ಶಂಕರಾಚಾರ್ಯ, ಮಹರ್ಷಿ ಪತಂಜಲಿ ಇತರರ ಕೊಡುಗೆ... ಹೀಗೆ ಆಯುಷ್ ಯೋಗಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಮಳಿಗೆಗಳು ಗಮನ ಸೆಳೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News