ಕೊಡಗು: ಗಡಿ ಗ್ರಾಮ ಚೆಂಬುವಿನಲ್ಲಿ ಮತ್ತೆ ನಡುಗಿದ ಭೂಮಿ

Update: 2022-07-02 14:44 GMT
ಸಾಂದರ್ಭಿಕ ಚಿತ್ರ

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 1.8 ಕಂಪನ ದಾಖಲಾಗಿದೆ.

ಚೆಂಬು ಪೆರಾಜೆ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆ ಎರಡು ಬಾರಿ ಭೂಮಿ ಕಂಪಿಸಿದ ಘಟನೆ ನಡೆದಿದ್ದು, ಇದೀಗ ಮತ್ತೆ ಭೂಮಿ ನಡುಗಿ ಗ್ರಾಮಸ್ಥರಲ್ಲಿ ಆತಂಕವನ್ನು ಮೂಡಿಸಿದೆ.

ಶನಿವಾರ ಮಧ್ಯಾಹ್ನ 1.21 ಗಂಟೆಗೆ ಕೆಲ ಕ್ಷಣಗಳ ಕಾಲ ಭೂಮಿ ಕಂಪಿಸಿದ್ದು, ಇದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢ ಪಡಿಸಿದ್ದು, ಭೂ ಕಂಪನದ ಕೇಂದ್ರ ದಕ್ಷಿಣ ಕನ್ನಡದ ದೊಡ್ಡಕುಮೇರಿ ಪಂಚಾಯ್ತಿಯ ಪಶ್ಚಿಮಕ್ಕೆ 1.3 ಕಿ.ಮೀ. ದೂರದಲ್ಲಿ, 10 ಕಿ.ಮೀ. ಆಳದಲ್ಲಿ ಇರುವುದಾಗಿ ತಿಳಿಸಿದೆ.

ಇದೊಂದು ಸಾಧಾರಣ ಭೂ ಕಂಪನವಾಗಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಭೂ ಕಂಪನದ ಕೇಂದ್ರದಿಂದ 20 ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನದ ಅನುಭವ ಆಗಬಹುದೆಂದು  ಕೇಂದ್ರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News