ಭ್ರಷ್ಟಾಚಾರ ಆರೋಪ: ಭೋವಿ ನಿಗಮದ ಎಂಡಿ ಬಂಧನ

Update: 2022-07-02 15:41 GMT

ಬೆಂಗಳೂರು, ಜು.2: ಹಣ ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪನನ್ನ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಂಧಿಸಿದೆ. 

ಸಾಕ್ಷಿ ನಾಶಪಡಿಸುವ ಸಾಧ್ಯತೆ ಹಿನ್ನೆಲೆ ಸದ್ಯ ನಾಗರಾಜಪ್ಪನನ್ನ ಬಂಧಿಸಿರುವ ಎಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. 

ತಲಾ 5 ಲಕ್ಷದಂತೆ 15 ಜನ ಫಲಾನುಭವಿಗಳ ಸುಮಾರು 70 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಆರೋಪ ನಾಗರಾಜಪ್ಪ ವಿರುದ್ಧ ಕೇಳಿ ಬಂದ ಕೂಡಲೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಮೇ. 15ರಂದು ಭೋವಿ ಅಭಿವೃದ್ಧಿ ನಿಗಮ ಹಾಗೂ ನಾಗರಾಜಪ್ಪನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತ್ತು. 

ತನಿಖೆ ವೇಳೆ, ಅಕ್ರಮವಾಗಿ ಪಲಾನುಭವಿಗಳ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ತಮ್ಮದೇ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News