ಮೈಸೂರು: ಖಾಸಗಿ ಸುದ್ದಿ ವಾಹಿನಿ ವಿರುದ್ಧ ನಟಿ ಪವಿತ್ರ ಲೋಕೇಶ್ ದೂರು, ರಕ್ಷಣೆ ನೀಡುವಂತೆ ಮನವಿ

Update: 2022-07-03 16:36 GMT
photo- twitter

ಮೈಸೂರು,ಜು.3: ಖಾಸಗಿ ಸುದ್ದಿ ವಾಹಿನಿ ವಿರುದ್ಧ ನಟಿ ಪವಿತ್ರ ಲೋಕೇಶ್ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಶನಿವಾರ ರಾತ್ರಿ ನಗರದ ವಿವಿ ಪುರಂ ಪೊಲೀಸ್ ಠಾಣೆ ಭೇಟಿ ನೀಡಿದ ಪವಿತ್ರ ಲೋಕೇಶ್ ಖಾಸಗಿ ವಾಹಿನಿ ವಿರುದ್ದ ದೂರ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯವರು ನಾನು ಎಲ್ಲಿ ಹೋದರು ಬೆನ್ನಟ್ಟಿ ಬರುತ್ತಿದ್ದು, ನನ್ನ ಮನೆ ಮತ್ತು ಮಕ್ಕಳ ಫೋಟೋಗಳನ್ನು ತೆಗೆಯುತ್ತಿದ್ದಾರೆ. ಇದರಿಂದ ನನಗೆ ಆತಂಕವಾಗುತ್ತಿದೆ. ಹಾಗಾಗಿ ನನಗೆ ರಕ್ಷಣೆ ನೀಡಿ ಎಂದು ದೂರು ನೀಡಿದ್ದಾರೆ.

ಪ್ರತಿ ದೂರು; ಈ ದೂರಿಗೆ ಪ್ರತಿಯಾಗಿ ಖಾಸಗಿ ಮಾಧ್ಯಮವು ಪವಿತ್ರ ಲೋಕೇಶ್ ವಿರುದ್ಧ ದೂರು ನೀಡಿದ್ದು, ನಾವು ಸುದ್ದಿ ಮಾಡಲು ನಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ  ಪವಿತ್ರ ಲೋಕೇಶ್ ಕಾರಿನಲ್ಲಿದ್ದ ಇಬ್ಬರು ಬೆಂಗಾವಲುಗಾರರು ಕಾರಿನಿಂದ ಇಳಿದು ನಮ್ಮ ಮೊಬೈಲ್ ಮತ್ತು ಐಡಿ ಕಾರ್ಡ್ ಕಸಿದುಕೊಂಡು ತೆಲುಗು ಭಾಷೆ ಯಲ್ಲಿ ಮತ್ತೆ ಬಂದರೆ, ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋದರು ಎಂದು ದೂರು ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News