ರಾಜ್ಯದಲ್ಲಿಂದು 1,692 ಕೊರೋನ ಪ್ರಕರಣ ದೃಢ, ಇಬ್ಬರು ಮೃತ್ಯು

Update: 2022-07-31 14:44 GMT

ಬೆಂಗಳೂರು, ಜು.31: ರಾಜ್ಯದಲ್ಲಿ ರವಿವಾರ 1,692 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಮೃತಪಟ್ಟಿದ್ದು, 1,094 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 40,073,63ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,104ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 11,105ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 

ಇಬ್ಬರ ಸಾವು: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಶಿವಮೊಗ್ಗ 1, ತುಮಕೂರು ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,692 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 22, ಬಳ್ಳಾರಿ 17, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 22, ಬೆಂಗಳೂರುನಗರ 1,154, ಬೀದರ್ 17, ಚಾಮರಾಜನಗರ 7, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 9, ಚಿತ್ರದುರ್ಗ 2, ದಕ್ಷಿಣಕನ್ನಡ 15, ದಾವಣಗೆರೆ 10, ಧಾರವಾಡ 73, ಗದಗ 2, ಹಾಸನ 48, ಹಾವೇರಿ 19, ಕಲಬುರಗಿ 31, ಕೊಡಗು 4, ಕೋಲಾರ 22, ಕೊಪ್ಪಳ 10, ಮಂಡ್ಯ 24, ಮೈಸೂರು 47, ರಾಯಚೂರು 7, ಶಿವಮೊಗ್ಗ 16, ತುಮಕೂರು 26, ಉಡುಪಿ 13, ಉತ್ತರಕನ್ನಡ 26, ವಿಜಯಪುರ ಜಿಲ್ಲೆಯಲ್ಲಿ ಮೂರು ಪ್ರಕರಣ ಪತ್ತೆಯಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News