ಸಂಜೀವಿನಿ ಸ್ವಸಹಾಯ ಸಂಘದಿಂದ ಚಿಕ್ಕಿ ಘಟಕ ಉದ್ಘಾಟನೆ
ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ವನಧನ ವಿಕಾಸ ಕೇಂದ್ರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಉಡುಪಿ ತಾಲೂಕು ಪಂಚಾಯತ್, ೮೦ ಬಡಗಬೆಟ್ಟು ಗ್ರಾಪಂ ಹಾಗೂ ನೇಸರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಶ್ರೀದೇವಿ ಸಂಜೀವಿನಿ ಸ್ವ ಸಹಾಯ ಸಂಘ ಮಹಿಳೆಯರು ಪ್ರಾರಂಭಿಸಿರುವ ಶ್ರೀದೇವಿ ಸಂಜೀವಿನಿ ಚಿಕ್ಕಿ ತಯಾರಿಕಾ ಘಟಕದ ಉದ್ಘಾಟನಾ ಸಮಾರಂಭವು ಶನಿವಾರ 80 ಬಡಗ ಬೆಟ್ಟು ಗ್ರಾಪಂ ಕಚೇರಿ ಕಟ್ಟಡದಲ್ಲಿ ಜರಗಿತು.
ಘಟಕವನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಉದ್ಘಾಟಿಸಿದರು. ಜಿಲ್ಲೆಯ ಅಂಗನವಾಡಿಗಳಿಗೆ ಸರಬರಾಜು ಮಾಡಲು 10 ಕೆ.ಜಿ. ಚಿಕ್ಕಿಯನ್ನು ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ ಅವರಿಗೆ ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಾಧವಿ ಆಚಾರ್ಯ, ಉಪಾಧ್ಯಕ್ಷೆ ನಿರುಪಮಾ ಹೆಗ್ಡೆ, ಸದಸ್ಯರಾದ ಶುಭಕರ್ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಜಿಪಂ ಎನ್‌ಆರ್ ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್, ಜಿಲ್ಲಾ ವ್ಯವಸ್ಥಾಪಕರು ಅವಿನಾಶ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ, ಯುವ ವೃತ್ತಿಪರ ಸಮಂತ್ ಶೆಟ್ಟಿ, ನೇಸರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಾಲತಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.