VIDEO- ಹುಬ್ಬಳ್ಳಿ: RSS ಕಚೇರಿಗೆ ತೆರಳಿ ರಾಷ್ಟ್ರಧ್ವಜ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು

Update: 2022-08-10 10:47 GMT

ಹುಬ್ಬಳ್ಳಿ, ಆ. 10: ಇಲ್ಲಿನ ಹೆಗ್ಗೇರಿಯಲ್ಲಿರುವ ಆರೆಸ್ಸೆಸ್ ಕೇಶವ ಕುಂಜ ಕಚೇರಿಯಲ್ಲಿ ಸಂಘದ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ  ಅವರ ನೇತೃತ್ವದಲ್ಲಿ ಖಾದಿಯಿಂದ ತಯಾರಿಸಿದ ತ್ರಿವರ್ಣ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು. 

ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ಎಲ್ಲ ಭಾರತೀಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು  ಪ್ರೊಫೈಲ್ ಪಿಚ್ಚರ್  ಆಗಿ ಪ್ರದರ್ಶಿಸಿದ್ದಾರೆ,  ಆದರೆ ಈಗಿನವರೆಗೂ ಆರೆಸ್ಸೆಸ್ ನವರು ತಮ್ಮ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಭಗವದ್ವಜವೇ ಇಟ್ಟುಕೊಂಡಿದ್ದಾರೆ, ಈಶ್ವರಪ್ಪನವರು ದೇಶದ ತ್ರಿವರ್ಣವನ್ನು ಬದಲಾಯಿಸಿ ಭಗವದ್ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಹೇಳಿದ್ದು ಸ್ಮರಿಸಿದ್ದರು, ಸಾವರ್ಕರ್, ಗೋಲ್ವಲ್ಕರ್ ಯಾವಾಗಲೂ ತ್ರಿವರ್ಣ ಧ್ವಜದ ವಿರುದ್ಧ ಮಾತನಾಡುತ್ತಿದ್ದರು ಎಂದು ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ಆರೋಪಿಸಿದರು. 

ಆರಂಭದಲ್ಲಿ ನಮಗೆ ಬೇಡ, ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕಚೇರಿಯಲ್ಲಿದ್ದ  ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು, ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಕಾಲದ ವಾಗ್ವಾದದ ಬಳಿಕ ಅಮರನಾಥ್ ಅವರು ತ್ರಿವರ್ಣ ರಾಷ್ಟ್ರಧ್ವಜವನ್ನು   ಸ್ವೀಕರಿಸಿದ್ದಾರೆ. 

ಈ ವೇಳೆ ಹೂವಪ್ಪ ದಾಯಗೋಡಿ, ಬಸವರಾಜ ಮಲಕಾರಿ, ಮೊಹಮ್ಮದ್ ಶರೀಫ್ ಗರಗದ, ವಿರೇಶ್ ಜಂಜುನವರ, ಕಿರಣ ಹಿರೇಮಠ, ಶಿವುಕುಮಾರ ಹಿರೇಮಠ,ಬಸವರಾಜ ಮ್ಯಾಗೇಡಿ,  ಮಲ್ಲಣ್ಣ ಮುತ್ತಗಿ, ಸಂತೋಷ್ ಮುದ್ದಿ,  ಬಾಳಮ್ಮ ಜಂಗಿನವರ, ಪುಷ್ಪಾ ಪಾಟೀಲ, ಸಂತೋಷ ನಾಯಕ, ವಿಶಾಲ  ಸಿಂಹಾಸನ, ನಾಗರಾಜ ಓಬ್ಬoಳಮಪಲ್ಲೆ, ಸುನಿಲ ಮರಾಠೆ ಇತರರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News