ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸುವ ಮುನ್ನ FIR ದಾಖಲು ಕಡ್ಡಾಯ: ಹೈಕೋರ್ಟ್ ತೀರ್ಪು

Update: 2022-08-10 13:45 GMT

ಬೆಂಗಳೂರು, ಆ.10: ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸುವ ಮುನ್ನ ಎಫ್‍ಐಆರ್ ದಾಖಲಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. 

ಬೆಂಗಳೂರಿನ ಬ್ರಿಗೇಡ್ ಬ್ಲೂಸ್ ಬಾರ್ ಮತ್ತು ರೆಸ್ಟೋರೆಂಟ್‍ನ ಪಾಲುದಾರ ಪಿ.ಎನ್. ಚಂದ್ರಶೇಖರ್ ಮತ್ತು ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ತೀರ್ಪು ಪ್ರಕಟಿಸಿದೆ. ಅಲ್ಲದೆ, 2016ರಲ್ಲಿ ಕಬ್ಬನ್‍ಪಾರ್ಕ್ ಪೊಲೀಸರು 7 ಮಂದಿ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.

ಸುಪ್ರೀಂಕೋರ್ಟ್ ಲಲಿತಾ ಕುಮಾರಿ ಮತ್ತು ಉತ್ತರಪ್ರದೇಶ ಸರಕಾರದ ನಡುವಿನ ಪ್ರಕರಣದಲ್ಲಿ, ಸಂವಿಧಾನದ ಕಲಂ 21ರ ಅಡಿಯಲ್ಲಿ ಆರೋಪಿಯ ಹಕ್ಕು ರಕ್ಷಣೆಯಾಗಬೇಕಾದರೆ ಮೊದಲು ಎಫ್‍ಐಆರ್ ದಾಖಲಿಸಿರಬೇಕು ಮತ್ತು ಆನಂತರ ನಿಯಮದಂತೆ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

2016ರ ಮೇ 9ರಂದು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಬ್ರಿಗೇಡ್ ಬ್ಲೂಸ್ ಬಾರ್ ಮತ್ತು ರೆಸ್ಟೋರೆಂಟ್‍ನ  ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಹೆಣ್ಣುಮಕ್ಕಳು ಅಸಭ್ಯವಾಗಿ ನೃತ್ಯ ಮಾಡುತ್ತಿದ್ದರು ಮತ್ತು ಗ್ರಾಹಕರು ಅವರತ್ತ ನೋಟುಗಳನ್ನು ಎಸೆಯುತ್ತಿದ್ದರು. ಆದರೆ. ದಾಳಿಗೂ ಮುನ್ನ ಎಫ್‍ಐಆರ್ ದಾಖಲಿಸಿರಲಿಲ್ಲ. ಹೀಗಾಗಿ, ಅರ್ಜಿದಾರರು, ಎಫ್‍ಐಆರ್ ದಾಖಲಿಸದೆ ದಾಳಿ ನಡೆಸಲಾಗಿದೆ. ಆನಂತರ ವಿಚಾರಣಾ ಕೋರ್ಟ್‍ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಅದನ್ನು ರದ್ದುಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News