10 ದಿನಗಳಲ್ಲಿ 1 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ ಮಾಡಿದ ಭಾರತೀಯ ಅಂಚೆ ಇಲಾಖೆ

Update: 2022-08-12 05:54 GMT

ಹೊಸದಿಲ್ಲಿ: ಹತ್ತು ದಿನಗಳ ಅಲ್ಪಾವಧಿಯಲ್ಲಿ ಭಾರತೀಯ ಅಂಚೆ  ಇಲಾಖೆ ತನ್ನ 1.5 ಲಕ್ಷ ಅಂಚೆ ಕಚೇರಿಗಳು ಹಾಗೂ  ಆನ್‌ಲೈನ್ ಮೂಲಕ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು(National Flags)  ಮಾರಾಟ ಮಾಡಿದೆ ಎಂದು ಸಂವಹನ ಸಚಿವಾಲಯ ಗುರುವಾರ ತಿಳಿಸಿದೆ.

"1.5 ಲಕ್ಷ ಅಂಚೆ ಕಚೇರಿಗಳ ಸರ್ವವ್ಯಾಪಿ ಜಾಲದೊಂದಿಗೆ ಅಂಚೆ ಇಲಾಖೆ (DoP) ದೇಶದ ಪ್ರತಿಯೊಬ್ಬ ನಾಗರಿಕರಿಗೂ 'ಹರ್ ಘರ್ ತಿರಂಗ' ('Har Ghar Tiranga') ಕಾರ್ಯಕ್ರಮವನ್ನು ಕೊಂಡೊಯ್ದಿದೆ. 10 ದಿನಗಳ ಅಲ್ಪಾವಧಿಯಲ್ಲಿ ಭಾರತ ಅಂಚೆ ಇಲಾ 1 ಕೋಟಿಗೂ ಹೆಚ್ಚು ರಾಷ್ಟ್ರೀಯ ಧ್ವಜಗಳನ್ನು ಅಂಚೆ ಕಚೇರಿಗಳು ಮತ್ತು ಆನ್‌ಲೈನ್ ಮೂಲಕ ನಾಗರಿಕರಿಗೆ ಮಾರಾಟ ಮಾಡಿದೆ ”ಎಂದು ಹೇಳಿಕೆ ತಿಳಿಸಿದೆ.

ಈ ಧ್ವಜಗಳನ್ನು ಇಲಾಖೆಯು 25  ರೂ. ದರದಲ್ಲಿ ಮಾರಾಟ ಮಾಡಿದೆ.

"ಆನ್‌ಲೈನ್ ಮಾರಾಟಕ್ಕಾಗಿ ಅಂಚೆ ಇಲಾಖೆಯು(Department Of Posts) ದೇಶಾದ್ಯಂತ ಯಾವುದೇ ವಿಳಾಸಕ್ಕೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುತ್ತದೆ.  ಇ-ಪೋಸ್ಟ್ ಆಫೀಸ್ ಸೌಲಭ್ಯದ ಮೂಲಕ ನಾಗರಿಕರು 1.75 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾರೆ. ಅಂಚೆ ಇಲಾಖೆಯು ತ್ರಿವರ್ಣ ಧ್ವಜವನ್ನು 25  ರೂ. ಗೆ ಮಾರಾಟ ಮಾಡುತ್ತಿದೆ" ಎಂದು ಸಚಿವಾಲಯ ಹೇಳಿದೆ.

ಅಂಚೆ ಕಚೇರಿಗಳ ಮೂಲಕ ರಾಷ್ಟ್ರಧ್ವಜದ ಮಾರಾಟವು 15 ಆಗಸ್ಟ್ 2022 ರವರೆಗೆ ತೆರೆದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News