ದಸರಾ ಗಜಪಡೆಗಳ ತೂಕ ಪರೀಕ್ಷೆ: ಈ ಬಾರಿಯೂ ಅರ್ಜುನನೇ ಬಲಶಾಲಿ

Update: 2022-08-12 06:59 GMT

ಮೈಸೂರು,ಆ.11: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ತೂಕ ಹಾಕುವ ಪ್ರಕ್ರಿಯೆ ನಡೆಯಿತು.ಈ ಬಾರಿಯೂ ಅರ್ಜುನನೇ ಬಲಶಾಲಿಯಾಗಿದ್ದಾನೆ.

ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್ ನಲ್ಲಿ ಅಂದರೆ ಲಾರಿಗಳಿಗೆ ತೂಕ ಹಾಕುವ ವೇವ್ ಬ್ರಿಡ್ಜ್ ನಲ್ಲಿ ಗುರುವಾರ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ. ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5660 ಕೆ.ಜಿ ತೂಕ ಹೊಂದಿದ್ದಾನೆ. ಕಾವೇರಿ 3100, ಅಭಿಮನ್ಯು 4770,ಮಹೇಂದ್ರ 4250, ಲಕ್ಷ್ಮೀ  2920,ಚೈತ್ರ 3050,ಭೀಮ 3920,ಧನಂಜಯ 4810 ಗೋಪಾಲಸ್ವಾಮಿ 5140 ಕೆ.ಜಿ.ತೂಕ ಹೊಂದಿದ್ದಾರೆ. 

ಡಿಸಿಎಫ್ ಡಾ.ಕರಿಕಾಳನ್ ಮಾತನಾಡಿ ಆನೆಗಳಿಗೆ ನಾಳೆ ಅಥವಾ ನಾಡಿದ್ದು ಅರಮನೆ ಒಳಗಡೆ ತಾಲೀಮು ಆರಂಭವಾಗಲಿದೆ. ಆ.14 ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳ  ಆರೋಗ್ಯ ಕಾಪಾಡುವುದಷ್ಟೇ  ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News