ಆ.15ರಂದು ಮಲ್ಪೆಯಲ್ಲಿ ಆರೋಗ್ಯ ಶಿಬಿರ

Update: 2022-08-12 13:29 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.12: ಸುಮನಸಾ ಕೊಡವೂರು, ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮುದ್ರಾಣಾಲಯಗಳ ಮಾಲಕರ ಸಂಘ ಉಡುಪಿ, ಮಲ್ಪೆ ಫಿಶರೀಶ್ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ  ಆ.15ರ ಸೋಮವಾರ  ಮಲ್ಪೆ ಸರಕಾರಿ ಪ್ರೌಢ ಶಾಲಾ ಸಭಾಭವನದಲ್ಲಿ ಬೆಳಗ್ಗೆ  9ರಿಂದ ಅಪರಾಹ್ನ 1 ಗಂಟೆಯವರೆಗೆ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗು ರಕ್ತದೊತ್ತಡ, ಮಧುಮೇಹ, ಬೂಸ್ಟರ್ ಲಸಿಕೆ ನೀಡುವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News