ತ್ರಿವರ್ಣ ಧ್ವಜ ಹಾರಿಸುವ ಮೂಲಕ ‘ಹರ್ ಘರ್ ತಿರಂಗ’ಅಭಿಯಾನ ಆಚರಿಸಿದ ಕೇಂದ್ರ ಸಚಿವ ಅಮಿತ್ ಶಾ

Update: 2022-08-13 09:06 GMT
Photo:twitter

ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷಾಚರಣೆಗೂ(75th anniversary of India's independence) ಮುನ್ನ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಶನಿವಾರ ದೇಶದಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನವನ್ನು (Har Ghar Tiranga campaign) ಆಚರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah ) ಹಾಗೂ  ಅವರ ಪತ್ನಿ ಸೋನಾಲ್ ಶಾ ತಮ್ಮ ನಿವಾಸದಲ್ಲಿ ಭಾರತದ ಧ್ವಜಾರೋಹಣ ಮಾಡಿದರು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬ ಅಭಿಯಾನದಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಅಥವಾ ಪ್ರದರ್ಶಿಸುವಂತೆ ಕೇಂದ್ರವು ನಾಗರಿಕರನ್ನು ಒತ್ತಾಯಿಸಿದೆ. ಧ್ವಜ ಪ್ರದರ್ಶನದ ಸಮಯಕ್ಕೆ ಯಾವುದೇ ನಿರ್ಬಂಧವಿಲ್ಲ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.  ಜೈಶಂಕರ್ ಅವರು 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಭಾಗವಹಿಸಿದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಸ್ತೆ ಸಾರಿಗೆ ಹಾಗೂ  ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ತಮ್ಮ ನಿವಾಸದಲ್ಲಿ ಭಾರತದ ಧ್ವಜಾರೋಹಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News