ಜಾನುವಾರುಗಳಲ್ಲಿ ಗಂಟು ಚರ್ಮ ರೋಗ: ಅಮುಲ್ ಹಾಲಿನ ಸಂಗ್ರಹದಲ್ಲಿ ಕುಸಿತ

Update: 2022-08-13 17:59 GMT

ಆನಂದ್ (ಗುಜರಾತ್), ಆ.11: ದೇಶದ ವಿವಿಧ ರಾಜ್ಯಗಳ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮ ಗಂಟು ರೋಗವು, ಭಾರತದ ಕ್ಷೀರ ರಾಜಧಾನಿಯೆಂದೇ ಕರೆಯಲ್ಪಡುವ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿಯೂ ಹಾಲು ಉತ್ಪಾದನೆಯ ಮೇಲೆ ಸಾಧಾರಣ ಪರಿಣಾಮ ಬೀರಿದೆ.  ಆನಂದ್ ಜಿಲ್ಲೆಯಲ್ಲಿ ಪ್ರಸಕ್ತ ದೈನಂದಿನ ಹಾಲು ಸಂಗ್ರಹಣೆಯಲ್ಲಿ ಶೇ.0.25ರಷ್ಟು ಕುಸಿತವುಂಟಾಗಿದೆಯೆಂದು ಗುಜರಾತ್ ಹಾಲು ಸಹಕಾರಿ ಮಾರುಕಟ್ಟೆ ಒಕ್ಕೂಟ (ಅಮುಲ್)ದ ಆಡಳಿತ ನಿರ್ದೇಶಕ ಆರ್.ಎಸ್.ಸೋಧಿ ತಿಳಿಸಿದ್ದಾರೆ.

‘‘ಈ ಕಾಯಿಲೆಯು ಕೆಲವೇ ದಿನಗಳಲ್ಲಿ ತೊಲಗಲಿದೆ ಹಾಗೂ ಆದರೆ ಈ ರೋಗ ತಗಲಿದ ಸಂದರ್ಭದಲ್ಲಿ ಜಾನುವಾರುಗಳು ಕಡಿಮೆ ತಿನ್ನುವುದರಿಂದ ಅವು ಕೃಶವಾಗುತ್ತವೆ. ಸಹಜವಾಗಿಯೇ ಆ 10-12 ದಿನಗಳ ಅವಧಿಯಲ್ಲಿ ಹಾಲಿನ ಉತ್ಪಾದನೆಯು ಕಡಿಮೆಯಾಗುವ ಸಾಧ್ಯತೆಯಿದೆಯೆಂದು’’ ಸೋಧಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

‘‘ನಮ್ಮ ದೈನಂದಿನ ಹಾಲು ಸಂಗ್ರಹವು   ಪ್ರತಿ ದಿನ 2 ಕೋಟಿ ಲೀಟರ್‌ಗಳಾಗಿದ್ದು, ಪ್ರಸಕ 50 ಸಾವಿರ ಲೀಟರ್‌ಗಳಷ್ಟು ಹಾಲು ಸಂಗ್ರಹ ಕಡಿಮೆಯಾಗಿದೆ. ಒಟ್ಚು ಹಾಲು ಸಂಗ್ರಹದಲ್ಲಿ ಈಗ ಶೇ.0.25ರಷ್ಟು ಕುಸಿತವುಂಟಾಗಿದೆ’’ ಎಂದು ಸೋಧಿ ತಿಳಿಸಿದ್ದಾರೆ.
ಚರ್ಮಗಂಟು ರೋಗದಿಂದಾಗಿ ಗುಜರಾತ್, ರಾಜಸ್ತಾನ, ಪಂಜಾಬ್ ಮತ್ತಿತರ ರಾಜ್ಯಗಳಲ್ಲಿ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ.  ಅಲ್ಲದೆ ಈ ಸೋಂಕಿನಿಂದ ಪೀಡಿತವಾದ ದನಗಳ ಹಾಲು ಉತ್ಪಾದನೆಯ ಮೇಲೂ ಪರಿಣಾಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News