ಚಿಕ್ಕಮಗಳೂರು: ತಾಲೂಕು ಕಚೇರಿಯಲ್ಲಿ ಹಾರಿದ ಅಶೋಕ ಚಕ್ರವಿಲ್ಲದ ರಾಷ್ಟ್ರಧ್ವಜ!

Update: 2022-08-14 18:31 GMT

ಚಿಕ್ಕಮಗಳೂರು, ಆ.14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಕಾರ್ಯಕ್ರಮದಂತೆ ಕಾಫಿನಾಡಿನಾದ್ಯಂತ ಮನೆಗಳೂ ಸೇರಿದಂತೆ ಎಲ್ಲೆಡೆ ರಾಷ್ಟ್ರಧ್ವಜಗಳು ರಾರಾಜಿಸುತ್ತಿರುವುದು ಒಂದೆಡೆಯಾದರೇ ಧ್ವಜಗಳನ್ನು ಮನಬಂದಂತೆ ಹಾರಿಸಿರುವ ಪ್ರಕರಣಗಳೂ ವರದಿಯಾಗಿವೆ.

ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಎದುರು ನೂರಾರು ರಾಷ್ಟ್ರಧ್ವಜಗಳನ್ನು ಕಟ್ಟಿದ್ದು, ಈ ರಾಷ್ಟ್ರಧ್ವಜಗಳ ಪೈಕಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಕಟ್ಟಿದ್ದ ಒಂದು ಧ್ವಜದಲ್ಲಿ ಅಶೋಕ ಚಕ್ರವೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಾಲೂಕು ಕಚೇರಿ ಆವರಣದಲ್ಲಿ ಕಳೆದ ಶನಿವಾರದಿಂದ ಅಶೋಕ ಚಕ್ರವಿಲ್ಲದ ರಾಷ್ಟ್ರಧ್ವಜ ಹಾರಾಡುತ್ತಿದೆ ಎನ್ನಲಾಗಿದೆ. 

ರವಿವಾರ ನಾಗರಿಕರು ತಾಲೂಕು ಕಚೇರಿ ಕಟ್ಟಡದ ಎದುರು ಅಶೋಕ ಚಕ್ರವಿಲ್ಲದ ಧ್ವಜ ಹಾರುತ್ತಿದ್ದುದನ್ನು ಕಂಡ ನಾಗರಿಕರು ಅದರ ಫೋಟೊ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಹರ್ ಘರ್ ತಿರಂಗಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಿರುವುದು ಚಿಕ್ಕಮಗಳೂರು ನಗರ ಸೇರಿದಂತೆ ಇಡೀ ಕಾಫಿನಾಡಿನಲ್ಲಿ ಸಾಮಾನ್ಯವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News