ಹಾಸ್ಟೆಲ್‍ಗಳ ಮೇಲಿನ 889 ವಿದ್ಯುತ್ ತಂತಿ ಮಾರ್ಗಗಳು ಡಿ.31ರೊಳಗೆ ತೆರವು: ಹೈಕೋರ್ಟ್‍ಗೆ ಮಾಹಿತಿ

Update: 2022-08-15 18:20 GMT

ಬೆಂಗಳೂರು, ಆ.15: ರಾಜ್ಯದಲ್ಲಿ ಹಾಸ್ಟೆಲ್‍ಗಳ ಮೇಲೆ ಹಾದು ಹೋಗಿದ್ದ ಒಟ್ಟು 7,478 ವಿದ್ಯುತ್ ಹೈಟೆನ್ಷನ್ ತಂತಿ ಮಾರ್ಗಗಳ ಪೈಕಿ 6,589 ತಂತಿ ಮಾರ್ಗಗಳನ್ನು ತೆರವು ಮಾಡಲಾಗಿದೆ. ಬಾಕಿ ಉಳಿದಿರುವ 889 ಮಾರ್ಗಗಳನ್ನು 2022 ಡಿ.31ರೊಳಗೆ ತೆರವುಗೊಳಿಸಲಾಗುವುದು ಎಂದು ಹೈಕೋರ್ಟ್‍ಗೆ ಕೆಪಿಟಿಸಿಎಲ್ ಮಾಹಿತಿ ನೀಡಿದೆ.  

ಕೊಪ್ಪಳ ನಗರದ ಬನ್ನಿಕಟ್ಟಿ ವ್ಯಾಪ್ತಿಯ ಬಿಸಿಎಂ ಹಾಸ್ಟೆಲ್‍ನಲ್ಲಿ 2019ರ ಆ.15ರಂದು ಧ್ವಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ದ ಪರ ವಕೀಲರು ವಾದಿಸಿ, ರಾಜ್ಯದಲ್ಲಿ 7,478 ಹೈ ಟೆನ್ಷನ್ ತಂತಿ ಮಾರ್ಗಗಳು ಹಾಸ್ಟೆಲ್‍ಗಳ ಮೇಲೆ ಹಾದು ಹೋಗಿದ್ದವು. ಈವರೆಗೆ 6,589 ತೆರವು ಮಾಡಲಾಗಿದೆ. ಬಾಕಿ ಉಳಿದಿರುವ 889 ತಂತಿ ಮಾರ್ಗಗಳನ್ನು 2022 ಡಿ.31ರೊಳಗೆ ತೆರವುಗೊಳಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಹಾಸ್ಟೆಲ್ ಕುರಿತ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News