ಪಿಝ್ಝಾ ಹಿಟ್ಟಿನ ಮೇಲೆ ನೆಲ ಒರೆಸುವ ಬ್ರಶ್: ಫೋಟೋ ವೈರಲ್ ಆದ ಬಳಿಕ ಡೊಮಿನೋಸ್‌ ಸ್ಪಷ್ಟೀಕರಣ

Update: 2022-08-15 18:26 GMT
Photo: Twitter/Tushar_KN

ಬೆಂಗಳೂರು: ಡೊಮಿನೋಸ್ ಪಿಝ್ಝಾ ಅಂಗಡಿಯೊಂದರಲ್ಲಿ ಪಿಝ್ಝಾ ಹಿಟ್ಟನ್ನು ನೆಲ ಶುಚಿಗೊಳಿಸುವ ಬ್ರಶ್‌ನೊಂದಿಗೆ ಇಟ್ಟಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಡೊಮಿನೋಸ್‌ ಕಂಪೆನಿಯು ಪ್ರತಿಕ್ರಿಯೆಯನ್ನು ನೀಡಿದೆ.

ಈ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಡೊಮಿನೋಸ್‌, “ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ನಾವು ಕಠಿಣವಾದ ವಿಶ್ವ ದರ್ಜೆಯ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿದ್ದೇವೆ. ಈ ಕಾರ್ಯಾಚರಣಾ ಮಾನದಂಡಗಳ ಉಲ್ಲಂಘನೆಗಳಿಗೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ನಮ್ಮ ಗಮನಕ್ಕೆ ಬಂದಿರುವ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಮತ್ತು ಸಂಶೋಧನೆಗಳ ಆಧಾರದ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದೆ.

ಪಿಝ್ಝಾ ಹಿಟ್ಟಿನೊಂದಿಗೆ ಶುಚಿಗೊಳಿಸುವ ಬ್ರಷ್‌ ಇರುವ ಚಿತ್ರವು ವ್ಯಾಪಕ ವೈರಲ್ ಆಗಿದ್ದು, ಹಲವು ನೆಟ್ಟಿಗರು ಆಹಾರದ ಶುದ್ಧತೆ ಹಾಗೂ ನೈರ್ಮಲ್ಯದ ಕುರಿತು ಡೊಮಿನೋಸ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ವೈರಲ್‌ ಆಗುತ್ತಿರುವ ಪ್ರಕಾರ ಇದು ಬೆಂಗಳೂರಿನ ಡೊಮಿನೋಸ್‌ ಅಂಗಡಿಯೊಂದರ ವಿಡಿಯೋ ಎನ್ನಲಾಗಿದೆ.

 ಫೋಟೊವನ್ನು ಬೆಂಗಳೂರಿನ ಸಾಹಿಲ್ ಕಾರಣ್ಯ ಎನ್ನುವವರು ಹಂಚಿಕೊಂಡು ‘ನೋಡಿ, ಡೊಮಿನೋಸ್ ನಮಗೆ ಅತ್ಯಂತ ತಾಜಾ ಆಗಿರುವ ಪಿಜ್ಜಾ ಡೆಲಿವರಿ ಮಾಡುವ ವಿಧಾನ, ಅತ್ಯಂತ ಅಸಹ್ಯಕರ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರೇ ಹೇಳಿರುವ ಪ್ರಕಾರ ಇದು ನಡೆದಿರುವುದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಚೂಢಸಂದ್ರದ ಬಳಿಯ ಹೊಸ ರೋಡ್ ಡೊಮಿನೋಸ್ ಪಿಜ್ಜಾ ಕೇಂದ್ರದಲ್ಲಿ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News