ಶಿವಮೊಗ್ಗ | ಅಹಿತಕರ ಘಟನೆ ಹಿನ್ನೆಲೆ: ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ

Update: 2022-08-16 05:40 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಸಾವರ್ಕರ್ ಭಾವ ಚಿತ್ರ ಇರುವ ಬ್ಯಾನರ್  ತೆರವುಗೊಳಿಸಿರುವ ವಿಚಾರಕ್ಕೆ ನಗರದಲ್ಲಿ ನಡೆದ ಗಲಾಟೆ ಹಾಗೂ ಚೂರಿ ಇರಿತ ಪ್ರಕರಣದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ( ಹಿಂಬದಿಯಲ್ಲಿ 40  ವರ್ಷಕ್ಕಿಂತ ಕಿರಿಯ ವಯಸ್ಸಿನ ಪುರುಷರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ) 

ಇನ್ನು ನಗರದಲ್ಲಿ 05 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಭಂಧಿಸಿದೆ.

ಯಾವುದೇ ಮೆರವಣಿಗೆ, ಸಭೆ, ಸಮಾರಂಬ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ.

ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕ ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇಧಿಸಲಾಗಿದೆ.

ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ  ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇಧಿಸಲಾಗಿದೆ.

ರಾತ್ರಿ 09:00 ರಿಂದ ಬೆಳಗಿನ ಜಾವ 05:00 ರವೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News