ಬೀದರ್‌: ರಸ್ತೆ ಅಪಘಾತದಲ್ಲಿ ಐವರು ಮೃತ್ಯು

Update: 2022-08-16 05:49 GMT
(ಕ್ರೇನ್‌ ನೆರವಿನಿಂದ ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸುತ್ತಿರುವುದು)

ಬೀದರ್‌:  ಕಾರು ಮತ್ತು ಕಂಟೇನರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟಿರುವ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಭಂಗೂರ ಚೆಕ್‌ಪೋಸ್ಟ್‌ ಬಳಿ ಸೋಮವಾರ ನಡೆದಿದೆ. 

ಗಿರಿಧರ್ (45), ಅನಿತಾ (36), ಮಯಾಂಕ್ (2), ಪ್ರಿಯಾಂಕಾ (15) ಮತ್ತು ಕಾರು ಚಾಲಕ ದಿನೇಶ್ (35) ಮೃತರು ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News