ಆರೆಸ್ಸೆಸ್ ಮತ್ತು ಸಾವರ್ಕರ್‌ರ ಹುಸಿ ದಲಿತ ಪ್ರೇಮ ಮತ್ತು ದೇಶ ಪ್ರೇಮ

Update: 2022-08-24 05:20 GMT

ಸಾವರ್ಕರ್ ಆಗಲಿ ಆರೆಸ್ಸೆಸ್ ಆಗಲಿ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ. 1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ.


ಭಾಗ-1

ಭಾರತವು ಆಚರಿಸುತ್ತಿರುವ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭವು ಇತಿಹಾಸದ ತಪ್ಪುಗಳನ್ನು ತಿದ್ದಿಕೊಂಡು ಭವಿಷ್ಯದ ಬಗ್ಗೆ ಭರವಸೆಯಿಂದ ದೃಢವಾದ ಹೆಜ್ಜೆಯಿಡುವ ಸ್ಫೂರ್ತಿಯನ್ನು ತಂದುಕೊಡಬೇಕಿತ್ತು ಹಾಗೂ ಈ ದೇಶದ ಎಲ್ಲಾ ಜನರಿಗೆ ಜಾತಿ-ಧರ್ಮ-ಲಿಂಗ-ಭಾಷೆಗಳ ಭೇದವಿಲ್ಲದೆ ಸಮಾನವಾದ ಪಾಲನ್ನು ಖಾತರಿ ಮಾಡುತ್ತಾ ಎಲ್ಲರೂ ಜೊತೆಗೂಡಿ ದೇಶಕಟ್ಟುವ ವಿಶ್ವಾಸವನ್ನು ಹುಟ್ಟಿಸಬೇಕಿತ್ತು. ಆದರೆ ಮೋದಿ ಸರಕಾರ ಮತ್ತು ಅವರ ಗುರುಮಠವಾದ ಆರೆಸ್ಸೆಸ್ ಈ ಸಂದರ್ಭಕ್ಕೆ ಅಮೃತಮಹೋತ್ಸವ ಎಂಬ ಹಿಂದೂ-ಬ್ರಾಹ್ಮಣೀಯ ಹೆಸರನ್ನು ಕೊಟ್ಟಿದೆ ಮತ್ತು ಇಡೀ ಸಂದರ್ಭವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರವಾಗಿ ಸೇವೆ ಸಲ್ಲಿಸಿದ ಹಿಂದೂರಾಷ್ಟ್ರ ಪರಿಕಲ್ಪನೆಯ ಪಿತಾಮಹ ಸಾವರ್ಕರ್‌ರನ್ನು ಭಾರತದ ಪಿತಾಮಹನನ್ನಾಗಿ ಸ್ಥಾಪಿಸುವ ಯೋಜನೆಗೆ ಬಳಸಿಕೊಳ್ಳುತ್ತಿದೆ. ಹಾಗೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಬ್ರಿಟಿಷರ ಜೊತೆ ಕೈಜೋಡಿಸಿದ್ದಲ್ಲದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ, ಈಗಲೂ ನಿರಂತರವಾಗಿ ಭಾರತದ ಬುನಾದಿಯನ್ನು ಕೋಮುವಾದದಿಂದ ಭಗ್ನಗೊಳಿಸುತ್ತಾ ಬಂದಿರುವ ಆರೆಸ್ಸೆಸ್ ಅನ್ನು ‘‘ಸ್ವಾತಂತ್ರ್ಯ ಹೋರಾಟದ ಸಮರವೀರರು’’ ಎಂದು ಸ್ಥಾಪಿಸಲು ಬಳಸಿಕೊಳ್ಳುತ್ತಿದೆ ಮತ್ತು ಈ ಸಂದರ್ಭದಲ್ಲೂ ತನ್ನ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರ ಕಲ್ಪನೆಯನ್ನು ಹೇರುತ್ತಾ ದೇಶದಲ್ಲಿ ಮತ್ತು ಸಮಾಜದಲ್ಲಿ ಮತ್ತಷ್ಟು ಬಿರುಕನ್ನು ಹುಟ್ಟಿಸಲು ಯತ್ನಿಸುತ್ತಿದೆ. ಇತ್ತೀಚೆಗೆ ದಿನ ಪತ್ರಿಕೆಯೊಂದರಲ್ಲಿ ರಾಷ್ಟ್ರವಾದಿ ಚಿಂತಕರೆಂದು ಕರೆಸಿಕೊಂಡವ ರೊಬ್ಬರು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಆರೆಸ್ಸೆಸ್-ಸಾವರ್ಕರ್ ಬಗ್ಗೆ 15 ಪ್ರಶ್ನೆಗಳನ್ನು ಕೇಳಿ ಮೊತ್ತಮೊದಲ ಬಾರಿಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಜೊತೆಗೆ ನೀಲಿಯಿಂದ ಅಪ್ಪಟ ಕೇಸರಿಯಾಗಿ ಬದಲಾಗಿರುವ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಅವರೂ ಬದಲಾದ ಉತ್ಸಾಹದಿಂದ ಸಾವರ್ಕರ್ ಅವರ ಬಗ್ಗೆ ‘‘ಸಮಾಜ ಸುಧಾರಣೆಯ ದಿವ್ಯ ಚೇತನ’’ವೆಂದು ಬಣ್ಣಿಸಿ ಸುದೀರ್ಘ ಆರೆಸ್ಸೆಸ್ ಪೆನ್ನಿನ ಲೇಖನವನ್ನು ಬರೆದಿದ್ದಾರೆ. ಈ ಲೇಖನಗಳ ಗುರಿ ಮೇಲ್ನೋಟಕ್ಕೆ ಸಿದ್ದರಾಮಯ್ಯನವರಾಗಿದ್ದರೂ ಸಾರಾಂಶದಲ್ಲಿ ಈ ದೇಶದಲ್ಲಿ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವಾದಿಗಳ ಹುನ್ನಾರವನ್ನು ವಿರೋಧಿಸುವ ಎಲ್ಲರಿಗೂ ಆ ಲೇಖನಗಳು ಸವಾಲು ಹಾಕಿವೆ.

ಆದ್ದರಿಂದ ಈ ಹಿಂದೂ-ಬ್ರಾಹ್ಮಣಶಾಹಿ ‘ರಾಷ್ಟ್ರವಾದಿ’ಗಳು ಎತ್ತಿರುವ ಪ್ರಶ್ನೆಗಳಿಗೆ ಒಂದೊಂದಾಗಿ ಇಲ್ಲಿ ಉತ್ತರಿಸಲಾಗುವುದು. ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಆರೆಸ್ಸೆಸ್ ನಾಯಕರು ಮತ್ತು ಸಾವರ್ಕರ್ ಅವರು ಬರೆದಿರುವ ಕೃತಿಗಳನ್ನೇ ಆಧರಿಸಲಾಗಿದೆ.

ದಯವಿಟ್ಟು ಹಿಂದೂರಾಷ್ಟ್ರವಾದಿಗಳು ತಮ್ಮದೇ ನಾಯಕರ ಈ ಕೃತಿಗಳನ್ನು ಪರಾಂಬರಿಸಬೇಕೆಂದೂ ವಿನಂತಿ: ಪ್ರಧಾನವಾಗಿ ಸಾವರ್ಕರ್ ಅವರು ಬರೆದಿರುವ:

1. Essentials Of Hindutva 2. Six Glorious Epochs Of Indian History 3. ಸಾವರ್ಕರ್ ಸಮಗ್ರ ವಾಘ್ಮಯದ ಆಯ್ದ ಭಾಗಗಳು

ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಬರೆದಿರುವ 1. We or Our Nationhood Defined 2. Bunch Of Thoughts 3. Organiser ಪತ್ರಿಕೆಯ ನಿರ್ದಿಷ್ಟ ಸಂಚಿಕೆಗಳು

ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್‌ರ ಬದುಕು ಹಾಗೂ ರಾಜಕೀಯದ ಬಗ್ಗೆ ಆರೆಸ್ಸೆಸ್ ನ ಪ್ರಮುಖ ನಾಯಕರಾದ ಹೂ.ವೆ. ಶೇಷಾದ್ರಿಯವರು ಬರೆದ "Dr. Hedgewar- The Epoch-Maker", ಸಿ.ಪಿ. ಬಿಷ್ಕರ್ ಮತ್ತು ಎನ್.ಎಚ್. ಪಾಲ್ಕರ್ ಅವರು ಬರೆದ ಹೆಡಗೆವಾರ್‌ರ ಜೀವನ ಚರಿತ್ರೆಗಳು.

ಇದಲ್ಲದೆ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ನಿರ್ದಿಷ್ಟ ಸಂಪುಟಗಳು, ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಮ್ ಅವರ ಬರಹಗಳು. ಆರೆಸ್ಸೆಸ್‌ನ ಅಭಿಮಾನಿ ವಾಲ್ಟರ್ ಆಂಡರ್ಸನ್ ಅವರ "Brothehood In Saffron', ಧನಂಜಯ್ ಕೀರ್ ಅವರ ಸಾವರ್ಕರ್ ಅವರ ಜೀವನ ಚರಿತ್ರೆ, ಕ್ರಿಸ್ಟೊಫೊ ಜಾಫರ್ಲೆ ಅವರ Hindu Natinolism ಇನ್ನಿತ್ಯಾದಿ ಗ್ರಂಥಗಳು. ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಿದ್ದು ದಯವಿಟ್ಟು ಭಕ್ತರು ಮತ್ತು ಆಸಕ್ತರು ಇವುಗಳನ್ನು ತಾವೇ ನೇರವಾಗಿ ಓದಿ ವಿಶ್ಲೇಷಿಸಿ ಸ್ವಂತ ತೀರ್ಮಾನಕ್ಕೆ ಬರುವುದು ಇನ್ನೂ ಒಳ್ಳೆಯದು.

ಪ್ರಶ್ನೆ 1: ಸಾವರ್ಕರ್ ದೇಶದ್ರೋಹಿಯಾಗಿದ್ದರೆ, ಕ್ಷಮಾಪಣೆ ಕೇಳಿದ್ದರೆ ಬ್ರಿಟಿಷರು ಅವರಿಗೆ 50 ವರ್ಷ ಕರಿನೀರಿನ ಶಿಕ್ಷೆ ನೀಡಿದ್ದೇಕೆ? ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ.

ಸಾವರ್ಕರ್ ಅವರು 1911ರಲ್ಲಿ ಲಂಡನ್‌ನಲ್ಲಿ ಬಂಧನಕ್ಕೊಳಗಾಗುವ ತನಕ ಕ್ರಾಂತಿಕಾರಿ ‘ಅಭಿನವ್ ಭಾರತ್’ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906ರಲ್ಲಿ ಅವರು ಲಂಡನ್‌ಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್‌ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು.

ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ ಲಂಡನ್‌ನಲ್ಲಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್‌ಲಾಲ್ ಧಿಂಗಾನನ್ನು ಅಥವಾ 1948ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ 1909ರಲ್ಲಿ ಅಭಿನವ್ ಭಾರತ್‌ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್‌ರನ್ನು ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್‌ನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು.

ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂತಹ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು. ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆಗೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ.

ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ. 1921ರಲ್ಲೇ ಅವರನ್ನು ಅಂಡಮಾನ್‌ನಿಂದ ಪುಣೆಯ ಯೆರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರಿಗೆ ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು.

1923ರಲ್ಲಿ ರತ್ನಗಿರಿಯಲ್ಲಿ ಮನೆಗೆ ಮರಳಿದ ನಂತರ ಬ್ರಿಟಿಷ್ ಸರಕಾರ ಅವರನ್ನು ನಂತರ ಯಾವತ್ತೂ ಬಂಧಿಸಲೇ ಇಲ್ಲ.

ಕಾರಣವಿಷ್ಟೆ. 1911ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಜೋಡಿಸಿ ‘ಸನ್ನಡತೆ’ಯನ್ನ್ನು ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು.

1923-37ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೆ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಮ್ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ. ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದ್ದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್‌ನಂತಹ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು. ಈಗ ಹೇಳಿ ಇಂತಹ ಸಾವರ್ಕರ್ ಸ್ವಾತಂತ್ರ್ಯ ವೀರನೇ?

ಪ್ರಶ್ನೆ 2. ತಮ್ಮ ಸಾಮ್ರಾಜ್ಯಕ್ಕೆ ಅಪಾಯ ಎಂದೆನಿಸಿದವರಿಗೆ ಮಾತ್ರ ಬ್ರಿಟಿಷರು ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು? ಹಾಗಿದ್ದಲ್ಲಿ ಕಾಂಗ್ರೆಸಿಗರನ್ನು ಏಕೆ ಅಂಡಮಾನ್ ಶಿಕ್ಷೆಗೆ ಕಳಿಸಲಿಲ್ಲ? 

  ಈ ಪ್ರಶ್ನೆಯಲ್ಲಿ ಅರ್ಧ ಸತ್ಯ ಇದೆ. ಬ್ರಿಟಿಷರು ತಮ್ಮ ಸಾಮ್ರಾಜ್ಯಕೆ ಅಪಾಯ ಎಂದೆನಿಸಿದವರನ್ನು ಒಂದೋ ಕೊಂದು ಹಾಕುತ್ತಿದ್ದರು ಅಥವಾ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು ಅಥವಾ ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು.

ಈ ಮೊದಲ ಗುಂಪಿನಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದುಹಾಕುತ್ತಿದ್ದ ಕ್ರಾಂತಿಕಾರಿಗಳು, ಬ್ರಿಟಿಷ್ ಬಂಡವಾಳಶಾಹಿ ಪ್ರಭುತ್ವದ ವಿರುದ್ಧ ಮತ್ತು ಬ್ರಿಟಿಷರ ರಕ್ಷಣೆಯೊಂದಿಗೆ ರೈತಾಪಿಗಳ ರಕ್ತ ಹೀರುತ್ತಿದ್ದ ಭೂ ಮಾಲಕರ ವಿರುದ್ಧ ಸೆಣೆಸುತ್ತಿದ್ದ ಆದಿವಾಸಿ ಹಾಗೂ ರೈತ ಬಂಡಾಯಗಾರರು, ಕಮ್ಯುನಿಸ್ಟರು ಹಾಗೂ ಹಲವಾರು ಕಡೆಗಳಲ್ಲಿ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸೇರಿಕೊಳ್ಳುತ್ತಾರೆ.

ಎರಡನೇ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಸಶಸ್ತ್ರ ಹೋರಾಟವನ್ನು ಅನುಸರಿಸುತ್ತಿರಲಿಲ್ಲ. ಅವರು ಬ್ರಿಟಿಷರನ್ನು ಸಾಂವಿಧಾನಿಕ ಮಾರ್ಗದಿಂದಲೇ ಹಂತಹಂತವಾಗಿ ಭಾರತ ಬಿಟ್ಟು ತೊಲಗಿಸಬೇಕೆಂದು ರಾಜಿ ಮತ್ತು ಸಂಘರ್ಷ ಮಾರ್ಗವನ್ನು ಅನುಸರಿಸುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಹಿಂಸಾತ್ಮಕ ಹಾಗೂ ಶಾಂತಿಯುತ ಹೋರಾಟಗಳನ್ನು ಮಾಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವಾದ ಬಂಡವಾಳಶಾಹಿ ಹಾಗೂ ಭೂ ಮಾಲಕರ ಬೆಂಬಲವೂ ಅವರಿಗಿರುತ್ತಿತ್ತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಾದರಿ ಹೋರಾಟಗಾರರು ಈ ಎರಡನೇ ಗುಂಪಿಗೆ ಸೇರುವವರು.

ಕಾಂಗ್ರೆಸ್ ನಾಯಕತ್ವಕ್ಕೆ ಪಾಠ ಕಲಿಸಬೇಕೆಂದಾಗ ಬ್ರಿಟಿಷರು ಅವರನ್ನೂ ಹಲವಾರು ವರ್ಷಗಳ ಕಾಲ ಜೈಲಿಗೆ ದೂಡಿದ್ದಾರೆ. ಗಾಂಧಿ, ನೆಹರೂ, ಪಟೇಲ್ ಇನ್ನಿತ್ಯಾದಿ ನಾಯಕರು ಈ ಎರಡನೇ ಸರಣಿಗೆ ಸೇರುವರು. ಆದರೆ ಮೂರನೇ ಗುಂಪು ಬ್ರಿಟಿಷರೊಡನೆ ಸಹಕರಿಸಿದವರು. ಯಾರು ತಮ್ಮ ಸಾಮ್ರಾಜ್ಯದ ಬುನಾದಿಗೆ ಸಹಕರಿಸುತ್ತಿದ್ದರೋ, ಯಾರು ಭಾರತೀಯರಲ್ಲಿ ಐಕ್ಯತೆ ಮೂಡದಂತೆ ಕೋಮು ವಿಭಜನೆಯನ್ನು ಬಿತ್ತುತ್ತಾ ಬ್ರಿಟಿಷರೊಂದಿಗೆ ಕೈಜೊಡಿಸುತ್ತಿದ್ದರೋ. ಯಾರು ಬ್ರಿಟಿಷ್ ಸಾಮ್ರಾಜ್ಯದ ಸಾಮಾಜಿಕ ಬೇರುಗಳಾದ ಭೂ ಮಾಲಕರು, ರಾಜರು ಮತ್ತು ಬಂಡವಾಳಶಾಹಿಗಳ ವಿರುದ್ಧ ಹೋರಾಡದಂತೆ ಜನರನ್ನು ಕೋಮು ಉನ್ಮಾದಕ್ಕೆ ದೂಡಿ ಬ್ರಿಟಿಷ್ ಆಡಳಿತ ಮುಂದುವರಿಯಲು ಸಹಾಯ ಮಾಡುತ್ತಿದ್ದರೋ ಅಂತಹವರನ್ನು ಬ್ರಿಟಿಷರು ಬಂಧಿಸುವುದಿರಲಿ ಅವರಿಗೆ ಸಕಲ ಸಹಕಾರ, ಜೈಲಿನಿಂದ ಗೃಹಬಂಧನ, ಬ್ರಿಟಿಷ್ ಸಂಬಳ ಎಲ್ಲಾ ಕೊಟ್ಟು ಗೌರವಿಸುತ್ತಿದ್ದರು.

ಸಾವರ್ಕರ್, ಆರೆಸ್ಸೆಸ್, ಮುಸ್ಲಿಮ್ ಲೀಗ್, ಹಿಂದೂ ಮಹಾಸಭಾ ಇವೆಲ್ಲವೂ ಈ ಕೊನೆಯ ಗುಂಪಿಗೆ ಸೇರುತ್ತಾರೆ.

ಪ್ರಶ್ನೆ 3: ಸಾವರ್ಕರ್ ಬ್ರಿಟಿಷರ ಹದ್ದುಗಣ್ಣಿನಲ್ಲಿದ್ದುಕೊಂಡೇ ಅಸ್ಪೃಶ್ಯತಾ ನಿವಾರಣಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನೀವು ಅದರ ಬಗ್ಗೆ ಹೇಳುವುದೇ ಇಲ್ಲ? ಅವರು ಹಿಂದೂ ಧರ್ಮದ ಕ್ರಿಟಿಕಲ್ ಇನ್ ಸೈಡರ್!

ಡಾ. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿಯ ಮೂಲ ಮನುಸ್ಮತಿಯನ್ನು ಆಧರಿಸಿದ ಹಿಂದೂ ಧರ್ಮದಲ್ಲಿದೆ ಎಂದು ತಿಳಿಹೇಳಿ 1927ರಲ್ಲೇ ಮನುಸ್ಮತಿಯನ್ನು ಸುಟ್ಟುಹಾಕಿದ್ದರು. ಆದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಅವರದ್ದು ಅದಕ್ಕೆ ತದ್ವಿರುದ್ಧವಾದ ತಿಳುವಳಿಕೆ. ಅವರ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದ ಹಿಂದೂ ಸಮಾಜ ಗಟ್ಟಿಯಾಗಿದೆ. ಆದ್ದರಿಂದ ಮನುಸ್ಮತಿಯೇ ಈ ದೇಶದ ಸಂವಿಧಾನವಾಗಬೇಕೆಂಬುದು ಅವರ ಹಿಂದೂರಾಷ್ಟ್ರದ ಸಾರ. ಸಾವರ್ಕರ್‌ಅವರು ತಮ್ಮ "Six Glorious Epochs Of Indian History' ಪುಸ್ತಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಜಾತಿ-ವರ್ಣ ವ್ಯವಸ್ಥೆಯನ್ನು ಅಲುಗಾಡಿಸಿದ ಬೌದ್ಧ ಮತ್ತು ಬೌದ್ಧ ಧರ್ಮ ದೇಶದ್ರೋಹಿ ಧರ್ಮ ಎಂದು ಕರೆಯುತ್ತಿದ್ದಾರೆ ಮತ್ತು ಪುಶ್ಯಮಿತ್ರ ಶೃಂಗ ಬೌದ್ಧರ ನರಮೇಧ ಮಾಡಿದ್ದು ಅಪಾರ ದೇಶಪ್ರೇಮಿ ಕರ್ತವ್ಯ ವಾಗಿತ್ತು ಎನ್ನುತ್ತಾರೆ.

ಹಾಗೆಯೇ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ಜಾತಿ ಪದ್ಧತಿ ಸಡಿಲವಾಗಿದ್ದರಿಂದಲೇ ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತದಲ್ಲಿ ಪರಧರ್ಮಕ್ಕೆ ತಾವು ಸಿಕ್ಕಿತು ಎಂದು ದೂರುತ್ತಾರೆ ಹಾಗೂ ಅವೈದಿಕವಾದ ಮತ್ತು ಜಾತಿ ನಿರಾಕರಣೆ ಮಾಡುವ ಜೈನ, ಬೌದ್ಧ, ಸಿಖ್, ಲಿಂಗಾಯತಗಳನ್ನು ಒಂದು ಧರ್ಮವೆಂದೇ ಮಾನ್ಯತೆ ಮಾಡಬಾರದೆಂದು ಹೇಳುತ್ತಾರೆ.

ಸಾವರ್ಕರ್ ಆಗಲಿ ಆರೆಸ್ಸೆಸ್ ಆಗಲಿ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ. 1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ. ಆಗ ಅಂಬೇಡ್ಕರ್ ಅವರ ‘ಪ್ರಬುದ್ಧ ಭಾರತ’ ಪತ್ರಿಕೆಯಲ್ಲಿ ‘ವೀರ’ ಸಾವರ್ಕರ್ ಅವರ ಹೇಡಿ ಹಾಗೂ ಸೋಗಲಾಡಿ ದಲಿತಪರತೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಾರೆ. ಆದರೂ 1930ರ ನಂತರ ಹಿಂದೂ ಮಹಾಸಭಾ ಹಾಗೂ ಸಾವರ್ಕರ್ ಅಸ್ಪೃಶ್ಯರ ಪರವಾಗಿ ಮಾತನಾಡಲು ಪ್ರಾರಂಭಿಸಿದರು. 1931ರಲ್ಲಿ ಆ ಪ್ರದೇಶದ ಸಾಮಂತರೊಬ್ಬರಿಗೆ ಸಾವರ್ಕರ್ ಅವರು ಅಸ್ಪೃಶ್ಯರಿಗಾಗಿ ‘ಪತಿತಪಾವನ’ ದೇವಸ್ಥಾನವೊಂದನ್ನು ಸ್ಥಾಪಿಸಲು ಸಹಾಯ ಮಾಡಿದರು. ಇದು ನಿಜ. ಆದರೆ ಅರ್ಧ ಸತ್ಯ.

ಏಕೆಂದರೆ ಈ ಪತಿತ ಪಾವನ ದೇವಸ್ಥಾನ ದಲಿತರು ಮತ್ತು ಸವರ್ಣೀಯರು ಎಲ್ಲರೂ ಒಟ್ಟಿಗೆ ದೇವದರ್ಶನ ಮಾಡುವಂತಹ ದೇವಸ್ಥಾನವಾಗಿರಲಿಲ್ಲ. ಬದಲಿಗೆ ಅದು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿದ್ದ ದೇವಸ್ಥಾನವಾಗಿತ್ತು. ಏಕೆಂದರೆ ಹಿಂದೂ ಮಹಾ ಸಭಾ ಆ ವೇಳೆಗಾಗಲೇ ತಾವು ಎಂದಿಗೂ ದೇವಸ್ಥಾನ ಪ್ರವೇಶದಂತಹ ಕಾರ್ಯಕ್ರಮಗಳ ಮೂಲಕ ಮೇಲ್ಜಾತಿ ಭಾವನೆಗಳಿಗೆ ಧಕ್ಕೆಯಾಗುವ ಕೆಲಸದಲ್ಲಿ ತೊಡಗುವುದಿಲ್ಲ ಎಂದು ಪ್ರಚಾರ ಮಾಡುತ್ತಿತ್ತು. ಅದು ಅವರ 1937ರ ಚುನಾವಣಾ ಪ್ರಣಾಳಿಕೆಯ ಭರವಸೆಯೂ ಆಗಿತ್ತು. ಈಗಾಗಲೇ ಹೇಳಿದಂತೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟವನ್ನು ಸಾವರ್ಕರ್ ಬೆಂಬಲಿಸಿರಲಿಲ್ಲ. ಹೀಗೆ ಪತಿತಪಾವನ ದೇವಸ್ಥಾನ ಒಂದು ಅಸ್ಪೃಶ್ಯ ದೇವಸ್ಥಾನ ಆಗಿತ್ತೇ ವಿನಾ ಅಸ್ಪೃಶ್ಯತಾ ನಿವಾರಣಾ ದೇವಸ್ಥಾನವಾಗಿರಲಿಲ್ಲ.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಅವರಿಗೆ ಮರುಪತ್ರವನ್ನೂ ಬರೆಯುತ್ತಾರೆ. ಇಂತಹ ಪ್ರಯತ್ನಗಳು ಸ್ವಾಗತಾರ್ಹವಾದರೂ ಎಲ್ಲಿಯತನಕ ಮನುಸ್ಮತಿ ಹಾಗೂ ವರ್ಣಾಶ್ರಮದ ವಿರುದ್ಧ ಹಿಂದೂ ಮಹಾಸಭಾ ನಿಲುವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಇಂತಹ ಕಾರ್ಯಕ್ರಮಗಳು ಯಾವ ಪ್ರಯೋಜನವನ್ನೂ ಉಂಟುಮಾಡುವುದಿಲ್ಲ ಎಂದು ಎಚ್ಚರಿಸುತ್ತಾರೆ. ನವ ಹಿಂದುತ್ವವಾದಿಗಳು ಆ ಪತ್ರದ ಮೊದಲ ಭಾಗವನ್ನು ಮಾತ್ರ ಪ್ರಚಾರ ಮಾಡುತ್ತಾ ಸಾವರ್ಕರ್ ಅವರನ್ನು ಅಂಬೇಡ್ಕರ್ ಮೆಚ್ಚಿಕೊಂಡಿದ್ದರು ಎಂದು ಪ್ರಚಾರ ಮಾಡುತ್ತಿದ್ದಾರೆ.

ಅಷ್ಟು ಮಾತ್ರವಲ್ಲ. ಸಿ.ಪಿ. ಬಿಷ್ಕರ್ ಅವರು ಹೆಡಗೆವಾರ್‌ರ ಜೀವನ ಚರಿತ್ರೆಯಲ್ಲಿ ದಾಖಲಿಸಿರುವಂತೆ: ಮೇಲ್ಜಾತಿಯವರ ಮನೆಗೆ ಹೋದಾಗ ಕೆಳಜಾತಿಯವರ ಜೊತೆ ಊಟ ಮಾಡಿ ಆ ಮನೆಯವರ ಮನಸ್ಸಿಗೆ ನೋವುಂಟುಮಾಡಬಾರದು ಎಂಬುದು ಹೆಡಗೆವಾರ್ ಅವರ ನಿಲುವಾಗಿತ್ತು. ಹಿಂದೂ ಮಹಾಸಭಾದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಆರೆಸ್ಸೆಸ್‌ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆಯವರಂತೂ ತಮ್ಮ ಡೈರಿಯಲ್ಲಿ:
‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News