ಭಜನೆ, ಭಕ್ತಿಗೀತೆಗಳಿಂದ ಅಪೌಷ್ಠಿಕತೆಯ ಹೊರೆಯನ್ನು ಕಡಿಮೆ ಮಾಡಬಹುದು: ಮನ್‌ ಕಿ ಬಾತ್‌ ನಲ್ಲಿ ಪ್ರಧಾನಿ ಮೋದಿ

Update: 2022-08-31 16:20 GMT

ಹೊಸದಿಲ್ಲಿ: ಆಗಸ್ಟ್ 28 ರಂದು ತಮ್ಮ ‘ಮನ್ ಕಿ ಬಾತ್’(Mann ki Baat) ರೇಡಿಯೊ ಕಾರ್ಯಕ್ರಮದ 92 ನೇ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ‘ಮೇರಾ ಬಚ್ಚಾ’ ಅಭಿಯಾನದ ಕುರಿತು ಮತ್ತು ಸೆಪ್ಟೆಂಬರ್‌ನಲ್ಲಿ ‘ಪೋಶನ್ ಮಾ’ (ಪೌಷ್ಟಿಕಾಂಶದ ಬಗ್ಗೆ ಹೊಂದಿರುವ ಕಾರ್ಯಕ್ರಮ)ವನ್ನು ಆಚರಿಸುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಭಜನೆ(Bhajan) ನಡೆಸಿ ಭಕ್ತಿಗೀತೆಗಳನ್ನು ಹಾಡುವುದರಿಂದ ಅಪೌಷ್ಟಿಕತೆಯ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಅವರು ಇದೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ.

ಭಾರತದ ಜನರ ಪೌಷ್ಟಿಕಾಂಶ ಮತ್ತು ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆಹಾರದ ಲಭ್ಯತೆ ನಿರ್ಣಾಯಕವಾಗಿದೆ ಎಂದು ಸಾಕಷ್ಟು ಪುರಾವೆಗಳಿವೆ. ಆದರೆ, ಭಜನೆಗಳು ಬಗ್ಗೆ ಅಂತಹ ಯಾವುದೇ ಪುರಾವೆಗಳಿಲ್ಲ ಎಂದು thewire.in ತನ್ನ ವರದಿಯಲ್ಲಿ ತಿಳಿಸಿದೆ.

ಅನೇಕ ವಿದ್ವಾಂಸರು ಮತ್ತು ವಿಜ್ಞಾನಿಗಳು ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿಯವರ ಅಪರಿಪೂರ್ಣ ಹೇಳಿಕೆಗಳನ್ನು ಟೀಕಿಸಿದ್ದಾರೆ. ಪೌಷ್ಟಿಕಾಂಶಕ್ಕಾಗಿ ಭಜನೆಗಳ ಕುರಿತು ಮೋದಿಯವರ ಹೇಳಿಕೆಯು ಕೋವಿಡ್-19 ಸಾಂಕ್ರಾಮಿಕ ರೋಗ ತೀವ್ರಗೊಳ್ಳುತ್ತಿದ್ದಾಗ ʼಚಪ್ಪಾಳೆ, ತಟ್ಟೆʼ ಬಡಿಯಲು ಪ್ರಧಾನಿ ನೀಡಿದ ಕರೆಯನ್ನು ನೆನಪಿಸುತ್ತದೆ. ಪ್ರಧಾನಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದ ಸಮಯದಲ್ಲಿ ಕೆಲವು ಪ್ರಮುಖ ಸೂಚಕಗಳ ಸುಧಾರಣೆಯ ದರವು ಕುಸಿದಿದ್ದರೂ ಸಹ, ಅವರ ಹೇಳಿಕೆಗಳು  ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಕ್ರಮಗಳ ಗಂಭೀರ ಪ್ರಾಮುಖ್ಯತೆಯಿಂದ ದೂರವಿರುತ್ತದೆ ಎಂದು ವರದಿ ಬೆಟ್ಟು ಮಾಡಿದೆ. 

ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ಹಾನಿಕಾರಕವಲ್ಲ. ಆದರೆ ಪೌಷ್ಟಿಕಾಂಶ ಕೊರತೆಯಂತಹ ನಿರ್ಣಾಯಕ ಸಮಸ್ಯೆಗೆ, ಪರೀಕ್ಷೆ ಮತ್ತು ಅಧಿಕೃತ ಪರಿಹಾರಗಳನ್ನು ಬದಿಗಿಡುವ ಅಭ್ಯಾಸಗಳ ಭಾಗವಾಗಿ (ಅಂತಹ ಆಚರಣೆಗಳನ್ನು) ಮಾಡಿದರೆ, ಅದು ಕೆಟ್ಟ ನಂಬಿಕೆಯಾಗುತ್ತದೆ ಎಂದು ವರದಿ ತಿಳಿಸಿದೆ.

ಭಾಷಣದಲ್ಲಿ, ಮೋದಿ ಅವರು,  ಮಧ್ಯಪ್ರದೇಶದ ನಿರ್ದಿಷ್ಟ ಸಮುದಾಯದ ಜನರು ಹೇಗೆ ಅಲ್ಪ ಪ್ರಮಾಣದ ಧಾನ್ಯಗಳನ್ನು ನೀಡುತ್ತಾರೆ, ಮತ್ತು ಹೀಗೆ ಸಂಗ್ರಹವಾದ ಧಾನ್ಯ ಬಳಸಿಕೊಂಡು ವಾರದಲ್ಲಿ ಒಂದು ದಿನ ಎಲ್ಲರಿಗೂ ಊಟವನ್ನು ತಯಾರಿಸಲಾಗುತ್ತದೆ ಎಂಬ ಕಥೆಯನ್ನು ವಿವರಿಸಿದರು. ಆದಾಗ್ಯೂ, ಅವರು ಈ ಹಂತದಲ್ಲಿ ಸ್ಥಳೀಯ ಆಹಾರ ಸಂಸ್ಕೃತಿಗಳ ಪಾತ್ರದ ಮೇಲೆ ಕೇಂದ್ರೀಕರಿಸುವ ಬದಲು ಭಜನೆಯಲ್ಲಿ ಭಕ್ತಿ ಸಂಗೀತಕ್ಕೆ ತಮ್ಮ ಗಮನವನ್ನು ಬದಲಾಯಿಸಿದ್ದು ಗೊಂದಲಕರವಾಗಿದೆ.

ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳು (NFHS) ಮತ್ತು ಸಮಗ್ರ ರಾಷ್ಟ್ರೀಯ ಪೋಷಣೆ ಸಮೀಕ್ಷೆಗಳು ಭಾರತದ ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಮತ್ತು ಸೂಕ್ಷ್ಮ ಪೋಷಕಾಂಶದ ಕೊರತೆಯ ಹೆಚ್ಚಾಗುತ್ತಿರುವುದನ್ನು ದಾಖಲಿಸಿವೆ. ಇತ್ತೀಚೆಗೆ ಪ್ರಕಟವಾದ NFHS-5 ಫಲಿತಾಂಶಗಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ, ಕ್ಷೀಣತೆ ಮತ್ತು ಕಡಿಮೆ ತೂಕದ ಬಗ್ಗೆ ವರದಿ ಮಾಡಿದೆ, ಇದು ಕಳೆದ ಐದು ವರ್ಷಗಳಿಂದ ಹೆಚ್ಚಾಗಿವೆ.

ಪ್ರಸ್ತುತ, ದೇಶದಲ್ಲಿ 35% ಕ್ಕಿಂತ ಹೆಚ್ಚು ಮಕ್ಕಳು ಬೆಳವಣಿಗೆಯಿಂದ ಕುಂಠಿತರಾಗಿದ್ದಾರೆ, 19.3% ರಷ್ಟು ʼವ್ಯರ್ಥʼವಾಗುತ್ತಿದ್ದಾರೆ ಮತ್ತು 32.5% ರಷ್ಟು ಕಡಿಮೆ ತೂಕವನ್ನು ಹೊಂದಿದ್ದಾರೆ.  (ಕುಂಠಿತ – ವಯಸ್ಸಿಗೆ ಹೋಲಿಸಿದರೆ ಕಡಿಮೆ ಎತ್ತರ, ಕಡಿಮೆ ತೂಕ - ವಯಸ್ಸಿಗೆ ಹೋಲಿಸಿದರೆ ಕಡಿಮೆ ತೂಕ, ವ್ಯರ್ಥ - ಎತ್ತರಕ್ಕೆ ಹೋಲಿಸಿದರೆ ಕಡಿಮೆ ತೂಕ.)

ಮೋದಿ ಪ್ರಧಾನಿಯಾದ ವರ್ಷದಿಂದ ಆಹಾರ ಮತ್ತು ಕೃಷಿ ಸಂಸ್ಥೆ ಮತ್ತು ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ ಅಪೌಷ್ಟಿಕತೆಯ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ 14.9% ರಿಂದ 15.5% ಕ್ಕೆ ಏರಿದೆ. ಇದರ ಪರಿಣಾಮವಾಗಿ, 2019 ರಲ್ಲಿ ವಿಶ್ವದ ಅಪೌಷ್ಟಿಕತೆಯ ಜನಸಂಖ್ಯೆಯ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಭಾರತದಲ್ಲೇ ಇದೆ. ಅಪೌಷ್ಟಿಕತೆಯ ಪ್ರಮಾಣವು 2014 ರಿಂದ 2016 ರವರೆಗೆ ಗಮನಾರ್ಹವಾಗಿ ಹೆಚ್ಚಾಗಿದೆ.

ಮಕ್ಕಳಲ್ಲಿ ದೀರ್ಘಕಾಲದ ಅಪೌಷ್ಟಿಕತೆಯನ್ನು ಉಂಟುಮಾಡುವಲ್ಲಿ ಹಲವಾರು ಅಂಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ತಾಯಿಯ ಪೌಷ್ಟಿಕಾಂಶದ ಸ್ಥಿತಿ, ಶಿಕ್ಷಣ, ಸ್ತನ್ಯಪಾನ, ಗರ್ಭಧಾರಣೆಯ ನಡುವಿನ ಅವಧಿ, ಮದುವೆಯ ವಯಸ್ಸು ಮತ್ತು ಉತ್ತಮ ನೈರ್ಮಲ್ಯ ಅವುಗಳಲ್ಲಿ ಕೆಲವು ಪ್ರಮುಖವಾದವುಗಳಾಗಿವೆ. ಭಾರತದ ಸುಮಾರು 36% ಮಹಿಳೆಯರು ಕಡಿಮೆ ತೂಕವನ್ನು ಹೊಂದಿದ್ದಾರೆ ಮತ್ತು 56% ಮಹಿಳೆಯರು ಮತ್ತು 15-19 ವರ್ಷ ವಯಸ್ಸಿನ 56% ಹುಡುಗಿಯರು ಕಬ್ಬಿಣಾಂಶದ ಕೊರತೆಯ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅರ್ಧದಷ್ಟು ಸಾವುಗಳು ಕಳಪೆ ಪೋಷಣೆಗೆ ಸಂಬಂಧಿಸಿವೆ. ಆರಂಭಿಕ ಜೀವನದಲ್ಲಿ ಕುಂಠಿತವಾಗುವುದು ಆರೋಗ್ಯ, ದೈಹಿಕ ಮತ್ತು ಅರಿವಿನ ಬೆಳವಣಿಗೆ ಮತ್ತು ಕಲಿಕೆ ಹಾಗೂ ಗಳಿಕೆಯ ಸಾಮರ್ಥ್ಯದ ಮೇಲೆ ಶಾಶ್ವತ ಪರಿಣಾಮಗಳನ್ನು ಬೀರುತ್ತದೆ. ಆದರೂ, ಆರೋಗ್ಯ ನೀತಿಗಳು ಮತ್ತು ಕಾರ್ಯಕ್ರಮಗಳು ಈ ಸಮಸ್ಯೆಯನ್ನು ಬಯಸಿದ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎಂದು ವರದಿ ಬೆಳಕು ಚೆಲ್ಲಿದೆ.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS) ಪೌಷ್ಟಿಕಾಂಶ-ಸಂಬಂಧಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೇರ ಹೊಣೆಗಾರರಾಗಿರುವ ಏಕೈಕ ಸರ್ಕಾರಿ ಸಂಸ್ಥೆಯಾಗಿದೆ. ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ ಮೂಲಕ ಸರಾಸರಿ ದೈನಂದಿನ ಆಹಾರ ಸೇವನೆ ಮತ್ತು ಶಿಫಾರಸು ಮಾಡಲಾದ ಆಹಾರ ಭತ್ಯೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಕೃಪೆ: Science.thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News