ಇಂಡೋನೇಶ್ಯಾದಲ್ಲಿ ಪ್ರಬಲ ಭೂಕಂಪ

Update: 2022-09-10 17:08 GMT

ಜಕಾರ್ತ, ಸೆ.10: ಇಂಡೊನೇಶ್ಯಾದ ಪಪುವಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಒಂದು ನಿಮಿಷದ ಬಳಿಕ 5.8 ತೀವ್ರತೆಯ ಪಶ್ಚಾತ್ ಕಂಪನ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಜಿಕಲ್ ಸರ್ವೆಯ ಹೇಳಿಕೆ ತಿಳಿಸಿದೆ.

ಎರಡೂ ಭೂಕಂಪಗಳು ಅಬೆಪುರ ಪಟ್ಟಣದಿಂದ ಸುಮಾರು 272 ಕಿಮೀ ದೂರದಲ್ಲಿ ತುಲನಾತ್ಮಕವಾಗಿ ಹೆಚ್ಚು ಆಳವಿಲ್ಲದ 15 ಕಿ.ಮೀ ಆಳದಲ್ಲಿ ಸಂಭವಿಸಿವೆ. ಜೀವಹಾನಿ ಅಥವಾ ನಾಶನಷ್ಟದ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಇಂಡೊನೇಶ್ಯಾದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News