ಹಾಸನ: ಮಕ್ಕಳ ಕಳ್ಳ ಎಂದು ಶಂಕಿಸಿ ಬುದ್ಧಿಮಾಂದ್ಯ ಯುವಕನಿಗೆ ಹಲ್ಲೆ; ಆರೋಪ

Update: 2022-09-27 17:19 GMT

ಹಾಸನ, ಸೆ.27: ಮಕ್ಕಳ ಕಳ್ಳ ಎಂದು ಶಂಕಿಸಿ ಮಾತುಬಾರದ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಥಳಿಸಿರುವ ಘಟನೆ ಹಾಸನ ನಗರ ಸಮೀಪದ ಕಟ್ಟಾಯ ಹೋಬಳಿ ಆವರಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಹಲ್ಲೆಗೆ ಒಳಗಾದ ಯುವಕ ಮಾತುಬಾರದ ಬುದ್ಧಿಮಾಂದ್ಯನಾಗಿದ್ದು, ಮೂರು ವರ್ಷಗಳಿಂದ ಸಕಲೇಶಪುರ ಪಟ್ಟಣದ ಜನರಿಗೆ ಚಿರಪರಿಚಿತರಾಗಿದ್ದ ಎನ್ನಲಾಗಿದೆ.  ಹಸಿದಾಗ ಊಟನೀಡುವಂತೆ ಜನರಲ್ಲಿ ಬೇಡುತ್ತಿದ್ದ ಮಳೆಗಾಲದಲ್ಲಿ ಹಾದಿಬೀದಿಯಲ್ಲಿ ಮಲಗುತ್ತಾ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.

ಸದ್ಯ ಬುದ್ಧಿಮಾಂಧ್ಯ ಯುವಕನನ್ನು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಸಕಲೇಶಪುರದ ಪಟ್ಟಣದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಕಳ್ಳ ಎಂಬ ಅನುಮಾನದಲ್ಲಿ ಮನಸೋಇಚ್ಛೆ ಥಳಿಸಿರುವುದು ಅಮಾನವೀಯ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಕೆಲವು ಪ್ರದೇಶದಲ್ಲಿ ಮಕ್ಕಳ ಕಳ್ಳರು ಎಂಬ ಹೆಸರಿನಲ್ಲಿ ಅಮಾಯಕರನ್ನು ಥಳಿಸುವುದು, ಕೊಲ್ಲುವ ಪ್ರಕರಣಗಳು ಕೇಳಿಬರುತ್ತಿದ್ದವು. ಅದರೆ ಇಂತಹ ಅಮಾನವೀಯ ಪ್ರಕರಣ ಹಾಸನ ಜಿಲ್ಲೆಯಲ್ಲಿ ನಡೆದಿರುವುದು ಆತಂಕಕ್ಕೆ ಈಡಾಗಿದೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News