ಮೈಸೂರು ರಾಜಮನೆತನದ ಸದಸ್ಯೆಯ ಕಾಲಿಗೆ ನಮಸ್ಕರಿಸುವ ಸುಧಾಮೂರ್ತಿ ಫೋಟೊ ವೈರಲ್: ಪರ-ವಿರೋಧ ಚರ್ಚೆ

Update: 2022-09-27 17:27 GMT
Photo: Twitter/@CitizenKamran

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ (Infosys foundation chairperson) ಮತ್ತು ಲೇಖಕಿ ಸುಧಾ ಮೂರ್ತಿ(Sudha Murthy) ಅವರು ಮೈಸೂರು ರಾಜಮನೆತನದ ಪ್ರಮೋದ ದೇವಿ ಒಡೆಯರ್(Pramoda Devi Wadiyar) ಅವರ ಕಾಲಿಗೆ ನಮಸ್ಕರಿಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫೋಟೋದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿಯವರನ್ನೂ ಕೂಡಾ ಕಾಣಿಸಿದ್ದಾರೆ.

ಇದು 2019 ರ ಚಿತ್ರವಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ. ಮೈಸೂರು ರಾಜ್ಯದ ಕೊನೆಯ ದೊರೆ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ತೆಗೆದ ಚಿತ್ರ ಇದು ndtv.com ವರದಿ ಮಾಡಿದೆ. 

ಪ್ರಮೋದಾ ದೇವಿ ಒಡೆಯರ್ ಅವರು ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿಯಾಗಿದ್ದು, ಸುಧಾ ಮೂರ್ತಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿರುವುದನ್ನು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ದಿನ ಮತ್ತು ಯುಗದಲ್ಲಿ ರಾಜಮನೆತನದ ಮುಂದೆ ಮಂಡಿಯೂರುವ ಕ್ರಮವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದರೆ, ಕೆಲವರು ಇದು ಗೌರವವನ್ನು ತೋರಿಸುವ ಒಂದು ಸೂಚಕ ಎಂದು ಸಮರ್ಥಿಸಿದ್ದಾರೆ.

 ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಸುಧಾ ಮೂರ್ತಿ ಅವರು ಮೈಸೂರು ರಾಜಮನೆತನದ ಸದಸ್ಯರ ಮುಂದೆ ನಮಸ್ಕರಿಸುತ್ತಿದ್ದಾರೆ. ಅವರು ಮಾದರಿ ಆಗಿರಬೇಕು. ಇದು ಇನ್ನೂ ಭಾರತದಲ್ಲಿ ರಾಜಮನೆತನದ ಸದಸ್ಯರನ್ನು ಅಭಿನಂದಿಸುವ ಸಂಪ್ರದಾಯವೇ?  ಅಥವಾ ಇದು ಹೆಚ್ಚು ಗೌರವ ಅಥವಾ ಗೌರವದ ಕ್ರಿಯೆಯಂತಿದೆಯೇ?" ಎಂದು ಪ್ರಶ್ನಿಸಿದ್ದಾರೆ. 

"ದೇವರೇ... ಅದು ಸುಧಾ ಮೂರ್ತಿಯೇ?  ರಾಜಮನೆತನದ ಮುಂದೆ ತಲೆಬಾಗುವುದೇ?  ನಮ್ಮ ರಕ್ತದಲ್ಲಿ ನಾವು ಹೊಂದಿರುವ ಮನಸ್ಥಿತಿಯನ್ನು, ಯಾವುದೇ ಸಂಪತ್ತು ಮತ್ತು ಸಾಧನೆಗಳು ನಮ್ಮ ನಡವಳಿಕೆಯಿಂದ ತೆಗೆದುಹಾಕುವುದಿಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ. 

ಇನ್ನು ಕೆಲವರು ಸುಧಾಮೂರ್ತಿ ನಡವಳಿಕೆಯನ್ನು ಸಮರ್ಥಿಸಿದ್ದು, ಇದು ನಮ್ಮ ರಾಜಮನೆತನಕ್ಕೆ ಗೌರವಿಸುವ ಸಂಪ್ರದಾಯ. ಸುಧಾಮೂರ್ತಿಯಂತಹ ಶಿಕ್ಷಿತರು ಇದನ್ನು ಪಾಲಿಸುತ್ತಾರೆಂದರೆ ಅವರಿಗೆ ನಮ್ಮ ಸಂಸ್ಕೃತಿ ಮೇಲಿರುವ ಗೌರವವನ್ನು ಅದು ಸೂಚಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಿಜ್ಞಾನಿಗಳಿಗೆ ನೀಡುವ 300ಕ್ಕೂ ಅಧಿಕ ಪ್ರಶಸ್ತಿಗಳಿಗೆ ಕತ್ತರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News