ಭಾರತ್ ಜೋಡೊ ಯಾತ್ರೆ ಮುಗಿಯುವುದರೊಳಗೆ ಕಾಂಗ್ರೆಸ್ ನಿರ್ನಾಮ: ಕೆ.ಎಸ್.ಈಶ್ವರಪ್ಪ

Update: 2022-09-27 17:40 GMT

ಚಿಕ್ಕಮಗಳೂರು, ಸೆ.27: 'ಭಾರತ್ ಜೋಡೊ ಯಾತ್ರೆ ಮುಗಿಯುವುದರೊಳಗೆ ಕಾಂಗ್ರೆಸ್ ನಿರ್ನಾಮವಾಗುತ್ತದೆ' ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಮಂಗಳವಾರ ನಗರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕಾಂಗ್ರೆಸ್ ಯಾವತ್ತು ಭಾರತ್ ಜೋಡೊ ಆರಂಭಿಸಿತೋ ಅಂದಿನಿಂದ ಕಾಂಗ್ರೆಸ್ ದಿನೇ ದಿನೇ ಕುಗ್ಗುತ್ತಿದೆ. ರಾಜಸ್ತಾನದಲ್ಲಿ ಮುಖಮಂತ್ರಿಗಳು ಕೈಕೊಟ್ಟು ಹೋದರು. 94-95 ಶಾಸಕರು ಕಾಂಗ್ರೆಸ್ ಬಿಟ್ಟರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಯಾರಾಗಬೇಕೆಂದು ಗುಂಪುಗಾರಿಕೆ ನಡೆಯುತ್ತಿದೆ' ಎಂದು ಟೀಕಿಸಿದರು.

'ಕಾಂಗ್ರೆಸ್  ಜೋಡೋ ಯಾತ್ರೆ ಕಾಂಗ್ರೆಸ್ ಥೋಡೋ ಯಾತ್ರೆ ಆಗುತ್ತಿದೆ. ಭಾರತ್ ಜೋಡೋ ಆಗುತ್ತಿಲ್ಲ ಇದು ಸ್ಪಷ್ಟ. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದ ಅವರು, ಭಾರತೀಯ ಜನತಾ ಪಾರ್ಟಿ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಪೇಸಿಎಂ ಪೋಸ್ಟರ್ ಷಡ್ಯಂತರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News