​ಶಾಂತಿ ನೊಬೆಲ್ ಗೆ ಶಿಫಾರಸು: PRIO ಅಂತಿಮ ಪಟ್ಟಿಯಲ್ಲಿ ಹರ್ಷ ಮಂದರ್, ಕಾರವಾನ್ ಎ ಮೊಹಬ್ಬತ್

Update: 2022-10-03 17:34 GMT
ಹರ್ಷ ಮಂದರ್ (Photo: PTI)  | [Karwan e Mohabbat]

ಹೊಸದಿಲ್ಲಿ: ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್‌ ಹಾಗೂ ಅವರ ​ಸೌಹಾರ್ದ, ಪ್ರೀತಿಯ ಸಂದೇಶ ಸಾರುವ ​ ​ಖ್ಯಾತ​ ಅಭಿಯಾನ 'ಕಾರವಾನ್-ಎ-ಮೊಹಬ್ಬತ್‌' ಓಸ್ಲೋದ ಶಾಂತಿ ಸಂಶೋಧನಾ ಸಂಸ್ಥೆ ​​PRIO (Peace Research Institute Oslo) ನೊಬೆಲ್‌ ಪ್ರಶಸ್ತಿಗಾಗಿ ​ಶಿಫಾರಸು ಮಾಡಿರುವ  ಅಂತಿಮ​ ಐದರ​ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.​ ಸೆಪ್ಟೆಂಬರ್ 30 ರಂದು ಈ ಅಂತಿಮ ಪಟ್ಟಿ ಪ್ರಕಟವಾಗಿದೆ. ​​ ಐಎಎಸ್ ಅಧಿಕಾರಿಯಾಗಿದ್ದ ಹರ್ಷ  ಮಂದರ್ 2002 ರ ಗುಜರಾತ್ ಹತ್ಯಾಕಾಂಡದ ಬಳಿಕ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸಾಮಾಜಿಕ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದಾರೆ.  ​ 

​PRIO​ ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯಲ್ಲ, ಅದರ ಅಂಗ ಸಂಸ್ಥೆಯೂ ಅಲ್ಲ. ಅದು ಇತರ ಸರಕಾರಗಳು, ಪ್ರತಿಷ್ಠಿತ ಸಂಸ್ಥೆಗಳು ಮಾಡುವಂತೆ ಶಿಫಾರಸು ಮಾತ್ರ ಮಾಡುತ್ತದೆ. ​ಪ್ರತಿ ವರ್ಷ ಶಾಂತಿ ನೊಬೆಲ್ ಗೆ  ​​PRIO ​ಶಿಫಾರಸು ಮಾಡುವ ​ಹೆಸರುಗಳು ಜಾಗತಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗುತ್ತವೆ. ಅಕ್ಟೋಬರ್ 3 ರಿಂದ 10ರ ನಡುವೆ ಈ ಬಾರಿ ಶಾಂತಿ ನೊಬೆಲ್  ಗೆ ಆಯ್ಕೆಯಾದವರ ಹೆಸರು ಘೋಷಣೆಯಾಗುತ್ತದೆ. 

ಧಾರ್ಮಿಕ ಉಗ್ರವಾದವು ತಾರತಮ್ಯ ಮತ್ತು ಹಿಂಸೆಯನ್ನು ಸಮರ್ಥಿಸಲು ಸಹಾಯ ಮಾಡುತ್ತದೆ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಧಾರ್ಮಿಕ ಉಗ್ರವಾದದ ವಿರುದ್ಧ ಹೋರಾಡಲು ಮತ್ತು ಅಂತರ್‌ಧರ್ಮೀಯ ಸಂವಾದವನ್ನು ಉತ್ತೇಜಿಸಲು ಮಹತ್ವದ ಕೊಡುಗೆ ನೀಡುವುದು ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವುದಕ್ಕೆ ಬಲವಾದ ಇಂಬು ನೀಡುತ್ತದೆ. 2017 ರಲ್ಲಿ ಕಾರವಾನ್-ಎ-ಮೊಹಬ್ಬತ್ ಅನ್ನು ಪ್ರಾರಂಭಿಸಿದ ಹರ್ಷ ಮಂದರ್ ಈ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು PRIO ತಿಳಿಸಿದೆ.

 ಮೊಹಮ್ಮದ್ ಝುಬೇರ್ | ಪ್ರತೀಕ್ ಸಿನ್ಹಾ 

​ಒಟ್ಟು 5 ವ್ಯಕ್ತಿ/ಸಂಸ್ಥೆಗಳು PRIO ಅಂತಿಮ​ ಶಿಫಾರಸು​ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

1. ಬೆಲರೂಸ್‌ ನ ಶಿಕ್ಷಣತಜ್ಞೆ ಮತ್ತು ಬೆಲರೂಸಿಯನ್ ಪ್ರಜಾಪ್ರಭುತ್ವ ಚಳವಳಿಯ ನಾಯಕಿ ಸ್ವಿಯಾಟ್ಲಾನಾ ಸಿಖಾನೌಸ್ಕಯಾ ಮತ್ತು ರಶ್ಯಾದ ಪ್ರಜಾಪ್ರಭುತ್ವ ಪರ ಹೋರಾಟಗಾರ ಅಲೆಕ್ಸಿ ನವಾಲ್ನಿ

2. ಅಂತಾರಾಷ್ಟ್ರೀಯ ನ್ಯಾಯಾಲಯ (International Court of Justice ): ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ​ದೇಶಗಳ ನಡುವಿನ ವಿವಾದಗಳನ್ನು ಇತ್ಯರ್ಥಗೊಳಿಸುತ್ತದೆ ಮತ್ತು ಅಂತರಾಷ್ಟ್ರೀಯ ಕಾನೂನು ವಿಷಯಗಳ ಬಗ್ಗೆ ಸಲಹೆ ಅಭಿಪ್ರಾಯಗಳನ್ನು ನೀಡುತ್ತದೆ.

3. ಹರ್ಷ್ ಮಂದರ್ ಮತ್ತು ಕಾರ್‌ವಾನ್-ಎ-ಮೊಹಬ್ಬತ್​ ಅಭಿಯಾನ ​

4. ಚೀನಾ​ದಲ್ಲಿ ಉಯ್ಘುರ್ ಸಂತ್ರಸ್ತರ ಪರ ಹೋರಾಟಗಾರ  ​ಇಲ್ಹಾಮ್ ತೊಹ್ತಿ​ ಮತ್ತು ಹಾಂಕಾಂಗ್‌ ನ ಮಾನವ ಹಕ್ಕು ಹೋರಾಟಗಾರರಾದ ​​ ಆಗ್ನೆಸ್ ಚೌ ಮತ್ತು ನಥನ್ ಲಾ

5. ವಿಶ್ವದ ಹಲವು ಕಡೆಗಳಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸುವ ವಿಚಾರಗಳನ್ನು ಸಂಗ್ರಹಿಸಿಡುವ​ ಸ್ಯಾನ್ ಫ್ಯಾನ್ಸಿಸ್ಕೊದ ​ Human Rights Data Analysis Group (HRDAG) and ​ಮತ್ತು ಸಾಮಾಜಿಕ ಕಾರ್ಯಕರ್ತರಿಗೆ​ಅಹಿಂಸಾತ್ಮಕ ಆಂದೋಲನ ನಡೆಸಲು ಮಾರ್ಗದರ್ಶನ ನೀಡುವ ಬೆಲ್ಗ್ರೇಡ್ ನ ​ ​​​​ Center for Applied ​ Nonviolent Action and Strategies (CANVAS).

ಮಹಾತ್ಮಾ ಗಾಂಧೀಜಿಯವರ ವ್ಯಕ್ತಿತ್ವದಿಂದ ಸಾಕಾರಗೊಂಡಿರುವ ಭಾರತವು ಧಾರ್ಮಿಕ ಸಹಿಷ್ಣುತೆ ಮತ್ತು ಬಹುತ್ವದ ಹೆಮ್ಮೆಯ ಸಂಪ್ರದಾಯವನ್ನು ಹೊಂದಿದೆ. ಭಾರತವು ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರ, ಈ ಸಂಪ್ರದಾಯವು ಒತ್ತಡದಲ್ಲಿದೆ. ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಆಡಳಿತದಲ್ಲಿ, ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯು ಕಷ್ಟಕರವಾಗಿದೆ ಮತ್ತು ದೇಶವು ಧಾರ್ಮಿಕ ಪ್ರೇರಿತ ಹಿಂಸಾಚಾರದ ಹಲವಾರು ಘಟನೆಗಳು ನಡೆದಿವೆ. ಈ ಹಿಂಸಾಚಾರಕ್ಕೆ ಪ್ರತಿಕ್ರಿಯೆ ಎಂಬಂತೆ ಲೇಖಕ, ಸಾಮಾಜಿಕ ಕಾರ್ಯಕರ್ತ ಮತ್ತು ಹೊಸದಿಲ್ಲಿಯ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕ ಹರ್ಷ ಮಂದರ್ ಅವರು ಕಾರವಾನ್-ಎ-ಮೊಹಬ್ಬತ್ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಮಂದರ್ ಧಾರ್ಮಿಕ ಸಹಿಷ್ಣುತೆ ಮತ್ತು ಸಂವಾದದ ಪ್ರಮುಖ ಧ್ವನಿಯಾಗಿದ್ದಾರೆ. ಅವರ ಅಭಿಯಾನವು ಅಂತರ್ಧರ್ಮೀಯ ಸಂಘರ್ಷ ಮತ್ತು ಹಿಂಸಾಚಾರವನ್ನು ವಿರೋಧಿಸುವವರಿಗೆ ಭರವಸೆಯಾಗಿದೆ ಎಂದೂ PRIO ತನ್ನ ವರದಿಯಲ್ಲಿ ಹೇಳಿದೆ.

ಭಾರತದಲ್ಲಿನ ಧಾರ್ಮಿಕ ಉಗ್ರವಾದ ಮತ್ತು ಅಸಹಿಷ್ಣುತೆಯ ವಿರುದ್ಧದ ಹೋರಾಟದ ಕುರಿತ ಪ್ರಶಸ್ತಿಗಾಗಿ ಇತರ ಅರ್ಹ ಅಭ್ಯರ್ಥಿಗಳೆಂದರೆ, ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕರಾದ ಮುಹಮ್ಮದ್ ಝುಬೈರ್ ಮತ್ತು ಪ್ರತೀಕ್ ಸಿನ್ಹಾ ಆಗಿದ್ದಾರೆ. ಭಾರತದಲ್ಲಿನ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲು ಹರಡುವ ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚುವ ಮೂಲಕ ಆಲ್ಟ್‌ ನ್ಯೂಸ್‌ ಗಮನಾರ್ಹ ಕೊಡುಗೆ ನೀಡುತ್ತಿದೆ ಎಂ​ದೂ ಪ್ರಕಟಣೆಯಲ್ಲಿ PRIO ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News