ಮಾಂಡ್ ಸೋಭಾಣ್‌ನ 250ನೇ ತಿಂಗಳ ವೇದಿಕೆ ಕಾರ್ಯಕ್ರಮ

Update: 2022-10-05 14:21 GMT

ಮಂಗಳೂರು, ಅ.5: ಕೊಂಕಣಿ ಪ್ರದರ್ಶನ ಕಲೆಯಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಬಂದಿರುವ ‘ಮಾಂಡ್ ಸೊಭಾಣ್’ನ  ತಿಂಗಳ ವೇದಿಕೆ ಸರಣಿಯ ೨೫೦ನೇ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಸಂಗೀತ ದಿನದ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.

ಸೌದಿ ಅರೇಬಿಯಾದ ಕೊಂಕಣಿ ಮುಖಂಡ ಅರುಣ್ ಪಲಿಮಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ನವಿಂ ಮೊತ್ಯಾಂ ಸಂಗೀತ ಸಂಜೆ ಪ್ರಸ್ತುತಪಡಿಸಲಾಯಿತು. ಹೊಸದಾಗಿ ಬರೆದು, ಸ್ವರ ಸಂಯೋಜಿಸಿದ 11 ಹಾಡುಗಳನ್ನು ಹಿರಿಯ ಮತ್ತು ಉದಯೋನ್ಮುಖ ಗಾಯಕರು ಹಾಡಿದರು. ರೋಶನ್ ಬೇಳ ನೇತೃತ್ವದಲ್ಲಿ ಸಂಜಯ್, ಸಚಿನ್, ಸ್ಟಾಲಿನ್ ಸಂಗೀತ ನೀಡಿದರು.

ಈ ಸಂದರ್ಭ ಸಂಗೀತ ವಿಶಾರದ ರೋಶನ್ ಮಾರ್ಟಿಸ್‌ರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಹಾಗೂ ಸುಮೇಳ್ ಪದಾಧಿಕಾರಿಗಳಾದ ಸುನೀಲ್ ಮೊಂತೇರೊ, ಕವಿತಾ ಜಾರ್ಜ್ ಹಾಗೂ ಸನ್ಮಾನಿತರ ತಾಯಿ ಸೆವ್ರಿನ್ ಮಾರ್ಟಿಸ್ ಉಪಸ್ಥಿತರಿದ್ದರು.

ರೈನಾ ಕ್ಯಾಸ್ತೆಲಿನೊ ಸ್ವಾಗತಿಸಿದರು. ರಂಗಭೂಮಿ ನಟ ನೆಲ್ಲು ಪೆರ್ಮನ್ನೂರು ಸಂಗೀತ ಕಾರ್ಯಕ್ರಮ ಹಾಗೂ ಐರಿನ್ ರೆಬೆಲ್ಲೊ ಸಭಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News