ಕರ್ನಾಟಕದ ನೆಲದಿಂದಲೇ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ: ಕಾಂಗ್ರೆಸ್ ವಿಶ್ವಾಸ

Update: 2022-10-06 12:32 GMT

ಬೆಂಗಳೂರು, ಅ. 6: ‘ಇಂದಿರಾ ಗಾಂಧಿಯವರ ರಾಜಕೀಯ ಜೀವನದಲ್ಲಿ ಮಹತ್ತರ ಶಕ್ತಿ ತುಂಬಿದ್ದು ಕರ್ನಾಟಕದ ಚಿಕ್ಕಮಗಳೂರು. ಸೋನಿಯಾ ಗಾಂಧಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದು ಬಳ್ಳಾರಿ.ಇತಿಹಾಸದಲ್ಲಿ ಕಾಂಗ್ರೆಸ್ ಪುಟಿದೆದ್ದಿದ್ದು ಕರ್ನಾಟಕದ ನೆಲದಿಂದಲೇ, ಈಗಲೂ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ' ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಭಾರತವನ್ನು ಕಟ್ಟುವುದರಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದಿದೆ. ಮುತುವರ್ಜಿ, ಬದ್ಧತೆ, ಸಮಚಿತ್ತ, ತಾಳ್ಮೆಯಂತಹ ಗುಣಗಳೇ ಮಹಿಳೆಯ ಶಕ್ತಿ.ಮಹಿಳೆ ಕುಟುಂಬವನ್ನಷ್ಟೇ ಅಲ್ಲ, ದೇಶ, ಪಕ್ಷ, ಅಧಿಕಾರಗಳನ್ನೂ ಕುಟುಂಬವನ್ನಷ್ಟೇ ಸಮರ್ಥವಾಗಿ, ಕಾಳಜಿವಹಿಸಿ ನಡೆಸಿದ ಇತಿಹಾಸದಲ್ಲಿ ಕಂಡಿದ್ದೇವೆ. ಮಹಿಳಾ ಶಕ್ತಿಯೇ, ದೇಶದ ಶಕ್ತಿ' ಎಂದು ತಿಳಿಸಿದೆ.

ಬರ್ನಲ್ ಭಾಗ್ಯ: ‘ಭಾರತ ಐಕ್ಯತಾ ಯಾತ್ರೆಯು ಭಾರತ ವಿಭಜನಾ ಜಾತ್ರೆ ಮಾಡುವವರಿಗೆ ತಮ್ಮ ಅಸ್ತಿತ್ವದ ಆತಂಕ ಮೂಡಿಸಿದ್ದು ಅಕ್ಷರಶಃ ಸತ್ಯ.ಈ ಚಿತ್ರವೂ ಬಿಜೆಪಿಗೆ ಸಹಿಸಲಸಾದ್ಯವಾದ ನೋವು ಕೊಡುವುದರಲ್ಲಿ ಅನುಮಾನವಿಲ್ಲ. ಯೋಚಿಸಬೇಡಿ ಬಿಜೆಪಿ ಮುಖಂಡರೇ ನಾವು(ಕಾಂಗ್ರೆಸ್) ಅಧಿಕಾರಕ್ಕೇರಿದ ಮೇಲೆ ನಿಮಗೆ ವಿಶೇಷವಾಗಿ ‘ಬರ್ನಲ್ ಭಾಗ್ಯ' ಯೋಜನೆ ನೀಡುತ್ತೇವೆ!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘180 ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸಲಾಗುವುದು' ಇದು ಬಿಜೆಪಿಯ ಭರವಸೆಯಾಗಿತ್ತು.ಈಗ ಕಬ್ಬಿನ ಹಣವೂ ಇಲ್ಲ, ಕಬ್ಬಿನ ಜಲ್ಲೆಯೂ ಇಲ್ಲ!. ಕಬ್ಬಿನ ಬಾಕಿ ಹಣ ಕೊಡಿಸಲೂ ಶೇ.40ರಷ್ಟು ಕಮಿಷನ್ ನೀಡಬೇಕೆ ‘ಪೇ ಸಿಎಂ' ಅವರೇ? ಬಿಜೆಪಿ ತನ್ನದೇ ಪ್ರಣಾಳಿಕೆಯ ಪುಸ್ತಕವನ್ನು ಮರೆತುಬಿಟ್ಟಿತೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ನಿಜ, ನಳಿನ್ ಕುಮಾರ್ ಕಟೀಲ್ ಅವರೇ,ಬಿಜೆಪಿಗರು ಭಾರತ ಬಿಟ್ಟು ಓಡೊ ಯಾತ್ರೆ...ಸುಳ್ಯದಲ್ಲಿ ಕಾರು ಬಿಟ್ಟು ಓಡಿ ಹೋಗಿದ್ರಲ್ಲ, ಪ್ರಾಕ್ಟೀಸ್ ಚೆನ್ನಾಗಿ ಆಗಿರಬೇಕಲ್ಲವೇ?, ತಮ್ಮ ಹತಾಶೆ, ಸೋಲು, ನೋವುಗಳನ್ನು ಜಾಹಿರಾತು ನೀಡಿ ವ್ಯಕ್ತಪಡಿಸುವ ಏಕೈಕ ರಾಜಕೀಯ ಪಕ್ಷ ಬಿಜೆಪಿ, ಒಂದೇ ವಾರದಲ್ಲಿ ಎರಡೆರೆಡು ಭಾರಿ ಪತ್ರಿಕೆಗಳಲ್ಲಿ ಮುಖಪುಟದ ಜಾಹಿರಾತು ನೀಡುತ್ತಿರುವ ಬಿಜೆಪಿಯ ಹತಾಶೆ ಹಿಮಾಲಯದೆತ್ತರಕ್ಕೆ ಏರಿದೆ,ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ!'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

----------------------------------------

‘ಮಂಗಳೂರಿನ ದಸರಾ ಆಚರಣೆಯಲ್ಲಿ ಯುಪಿ ಮಾಡೆಲ್ ಬುಲ್ಡೋಜರ್ ಬಿಂಬಿಸುವ ಟ್ಯಾಬ್ಲೋ ಮೆರವಣಿಗೆ. ಕರ್ನಾಟಕದಲ್ಲಿ ಯುಪಿ ಮಾದರಿಯ ಅರಾಜಕತೆ ಸೃಷ್ಟಿಸಲು ಬಿಜೆಪಿ ಯತ್ನ. ಸರಕಾರದ ಅಧಿಕೃತ ಕಾರ್ಯಕ್ರಮದಲ್ಲಿ ವಿಕೃತಿ ಮೆರೆದ ಬಿಜೆಪಿ. ನಮ್ಮದು ಸಂವಿಧಾನಿಕ ನ್ಯಾಯ. ಬಿಜೆಪಿಯದ್ದು ಬುಲ್ಡೋಜರ್ ನ್ಯಾಯ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News